Friday, May 3, 2024
Homeತಾಜಾ ಸುದ್ದಿಮದ್ಯಪ್ರಿಯರಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್: ಬಿಯರ್ ದರದಲ್ಲಿ ಭಾರೀ ಇಳಿಕೆ

ಮದ್ಯಪ್ರಿಯರಿಗೆ ಇಲ್ಲಿದೆ ನೋಡಿ ಗುಡ್ ನ್ಯೂಸ್: ಬಿಯರ್ ದರದಲ್ಲಿ ಭಾರೀ ಇಳಿಕೆ

spot_img
- Advertisement -
- Advertisement -

ಉತ್ತರ ಪ್ರದೇಶ: ಎಲ್ಲಾ ವಸ್ತುಗಳ ದರ ಏರಿಕೆಯಾಗುತ್ತಿರುವ ಈ ದುಬಾರಿ ದುನಿಯಾದಲ್ಲಿ ಯೋಗಿ ಆದಿತ್ಯನಾಥ್​ ಸರ್ಕಾರ ಮಾತ್ರ ಉತ್ತರ ಪ್ರದೇಶದ ಮದ್ಯಪ್ರಿಯರಿಗೆ ಗುಡ್​ ನ್ಯೂಸ್​ ಒಂದನ್ನ ನೀಡಿದೆ. ಹೌದು..! ಉತ್ತರ ಪ್ರದೇಶದಲ್ಲಿ ಬಿಯರ್​ ದರವನ್ನ 20 ರೂಪಾಯಿ ಕಡಿಮೆ ಮಾಡಲಾಗಿದೆ.

ಆದರೆ ವಿದೇಶಿ ಮದ್ಯಗಳ ದರದಲ್ಲಿ 15 ರಿಂದ 20 ಪ್ರತಿಶತ ಏರಿಕೆ ಕಂಡಿದೆ. ಬಿಯರ್​ನ ಅಬಕಾರಿ ಹಾಗೂ ಪರವಾನಿಗಿ ಶುಲ್ಕದಲ್ಲಿ ಮಾತ್ರ ಯಾವುದೇ ವಿನಾಯಿತಿ ನೀಡಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ಕೊರೊನಾ ವೈರಸ್​ ಸಂಕಷ್ಟದಿಂದಾಗಿ ಉತ್ತರ ಪ್ರದೇಶದಲ್ಲಿ ಬಿಯರ್​ ಮಾರಾಟಕ್ಕೆ ಭಾರೀ ಹೊಡೆತ ಬಿದ್ದಿತ್ತು. ಕಳೆದ ವರ್ಷ ಏಪ್ರಿಲ್​ನಿಂದ ನವೆಂಬರ್​ವರೆಗೆ ಉತ್ತರ ಪ್ರದೇಶದಲ್ಲಿ ಕೇವಲ 17.28 ಕೋಟಿ ಬಿಯರ್​ ಬಾಟಲಿ ಖಾಲಿಯಾಗಿದೆ. ಈ ಮೂಲಕ ಉತ್ತರ ಪ್ರದೇಶಕ್ಕೆ ಬಿಯರ್​ ಉದ್ಯಮದಲ್ಲಿ 36 ಪ್ರತಿಶತ ನಷ್ಟ ಉಂಟಾಗಿತ್ತು. ಹೀಗಾಗಿ ಉತ್ತರ ಪ್ರದೇಶದಲ್ಲಿ ಮತ್ತೆ ಬಿಯರ್​ ಮಾರಾಟದ ಪ್ರಗತಿಯನ್ನ ಹೆಚ್ಚಿಸಬೇಕು ಎಂಬ ಕಾರಣಕ್ಕೆ ಈ ಮಹತ್ವದ ಕ್ರಮವನ್ನ ಕೈಗೊಳ್ಳಲಾಗಿದೆ.

- Advertisement -
spot_img

Latest News

error: Content is protected !!