Friday, May 17, 2024
Homeಕರಾವಳಿವಿಟ್ಲ: ಇತಿಹಾಸ ಪ್ರಸಿದ್ಧ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವರ್ಷಾವಧಿ ಮೆಚ್ಚಿ ಜಾತ್ರೆಯ ಪ್ರಯುಕ್ತ ಇಂದು...

ವಿಟ್ಲ: ಇತಿಹಾಸ ಪ್ರಸಿದ್ಧ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವರ್ಷಾವಧಿ ಮೆಚ್ಚಿ ಜಾತ್ರೆಯ ಪ್ರಯುಕ್ತ ಇಂದು ನೆರವೇರಿತು ಗೊನೆ ಮುಹೂರ್ತ

spot_img
- Advertisement -
- Advertisement -

ವಿಟ್ಲ: ಫೆಬ್ರವರಿ 13 ರಂದು ಇತಿಹಾಸ ಪ್ರಸಿದ್ಧ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ಮೆಚ್ಚಿ ಜಾತ್ರೆ ನಡೆಯಲಿದೆ . ಈ ಪ್ರಯುಕ್ತ ಇಂದು ಪುಂಡಿಕೈ ಮನೆಯಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮವು ನಡೆಯಿತು .

ಅನಂತಕೋಡಿ ಸುಬ್ರಮಣ್ಯ ದೇವಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಆ ಬಳಿಕ ಪುಂಡಿಕೈ ಮನೆಯಲ್ಲಿ ಗೊನೆ ಮುಹೂರ್ತ ನೆರವೇರಿತು. ಪುಂಡಿಕೈ ಮನೆಯಿಂದ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಗೆ ಭಕ್ತಾದಿಗಳು ಆಗಮಿಸಿದ ನಂತರ ಗೊನೆ ಮುಹೂರ್ತ ಪೂಜೆ ನೆರವೇರಿತು.

ಜಾತ್ರೆಯ ತಯಾರಿ ಕುರಿತು ಯಾವುದೇ ಸಲಹೆ ಸೂಚನೆ , ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ವಿಷಯ ಪ್ರಸ್ತಾಪಿಸುವುದಾದರೆ ಗೊನೆ ಕಡಿಯುವುದರ ಮೊದಲಿಗೆ ಪ್ರಸ್ತಾಪೀಸಬೇಕು ಗೊನೆ ಮುಹೂರ್ತದ ಬಳಿಕ ಯಾರು ಯಾವುದೇ ವಿಚಾರ ಪ್ರಸ್ತಾಪಿಸುವ ಹಾಗೇ ಇಲ್ಲ.

ಇಲ್ಲಿನ ಗೊನೆಮುಹೂರ್ತ ಕಾರ್ಯಕ್ರಮದ ವಿಶೇಷ ಏನೆಂದರೆ
ಇಂತಹ ಆಚಾರ- ವಿಚಾರ ನಂಬಿಕೆ ಹಿಂದಿನ ಕಾಲದಿಂದಲೂ ಪಾಲಿಸಿಕೊಂಡು ಬರುತ್ತಿರುವ ಈ ಪದ್ಧತಿಯನ್ನು ಇಂದಿಗೂ ಅನುಸರಿಸಿಕೊಂಡು ಬಂದಿದ್ದಾರೆ . ಈ ಗೊನೆ ಮುಹೂರ್ತ ಕಾರ್ಯಕ್ರಮದಲ್ಲಿ ಮೊತ್ತೇಸರರು , ಆಡಳಿತ ಮೊತ್ತೇಸರರು ಊರಿನ ಹಿರಿಯರು , ಗ್ರಾಮಸ್ಥರು ಉಪಸ್ಥಿತರಿದ್ದರು .

- Advertisement -
spot_img

Latest News

error: Content is protected !!