Tuesday, June 30, 2026
Homeತಾಜಾ ಸುದ್ದಿಭಾವೀ ಪತ್ನಿಯೊಂದಿಗೆ ಸೇರಿ ಚಿನ್ನ ಕದ್ದ ಸಾಫ್ಟ್ವೇರ್ ಉದ್ಯೋಗಿ: ಕಿಲಾಡಿ ಜೋಡಿ ಚಿನ್ನ ಎಗರಿಸಿದ್ದು ಹೇಗೆ...

ಭಾವೀ ಪತ್ನಿಯೊಂದಿಗೆ ಸೇರಿ ಚಿನ್ನ ಕದ್ದ ಸಾಫ್ಟ್ವೇರ್ ಉದ್ಯೋಗಿ: ಕಿಲಾಡಿ ಜೋಡಿ ಚಿನ್ನ ಎಗರಿಸಿದ್ದು ಹೇಗೆ ಗೊತ್ತಾ?

- Advertisement -
- Advertisement -

ಬೆಂಗಳೂರು: ಸಾಫ್ಟ್ವೇರ್ ಉದ್ಯೋಗಿಯಾಗಿಯೊಬ್ಬ ಭಾವೀ ಪತ್ನಿಯೊಂದಿಗೆ ತೆರಳಿ ಚಿನ್ನ ಕದ್ದು ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರಿನ ಜೆ.ಪಿ.ನಗರದಲ್ಲಿ ರಾಘವೇಂದ್ರ ರಾವ್ ಎಂಬಾತ ತನ್ನ ಭಾವಿ ಪತ್ನಿಯೊಂದಿಗೆ ನವರತನ್ ಜ್ಯುವೆಲರ್ಸ್ಗೆ ತೆರಳಿದ್ದಾನೆ. ಅಲ್ಲಿ ಎರಡು ಚಿನ್ನದ ಸರಗಳನ್ನು ನೋಡಿ ಆ ಜೋಡಿ ಫೈನಲ್ ಮಾಡಿದೆ.ನಂತರ ಎಟಿಎಂ ಕಾರ್ಡ್ ಬಿಟ್ಟು ಬಂದಿದ್ದು, ಬೈಕ್ನಲ್ಲಿ ಇದೆ ತರುತ್ತೇನೆಂದು ಸುಳ್ಳು ಹೇಳಿ ಹೋದ ರಾಘವೇಂದ್ರ ಅಂಗಡಿ ಮುಂದೆ ತನ್ನ ಬೈಕ್ ತಂದು ನಿಲ್ಲಿಸಿದ್ದಾನೆ.

ಇತ್ತ ಈ ಯುವತಿ ಎರಡು ಚಿನ್ನದ ಸರಗಳನ್ನು ಕತ್ತಿನಲ್ಲಿ ಹಾಕಿಕೊಂಡೇ ಎಟಿಎಂ ನಿಂದು ಹಣ ತರೋದಾಗಿ ಹೊರಗೆ ಹೋಗಿದ್ದಾಳೆ. ಹೇಗಿದ್ದರೂ ಚಿನ್ನ ಕೊಳ್ಳುತ್ತಾರೆಂಬ ನಂಬಿಕೆಯಲ್ಲಿ ಆ ಅಂಗಡಿ ಸಿಬ್ಬಂದಿ ಕೂಡ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಇತ್ತ ಅಂಗಡಿಯಿಂದ ಹೊರ ಹೋಗುತ್ತಿದ್ದಂತೆ ಈ ನವ ಜೋಡಿ ಎಸ್ಕೇಪ್ ಆಗಿದ್ದಾರೆ. ತಕ್ಷಣವೇ ಜೆ.ಪಿ.ನಗರ ಪೊಲೀಸರಿಗೆ ಅಂಗಡಿ ಸಿಬ್ಬಂದಿ ದೂರು ನೀಡಿದ್ದಾರೆ. ಕೂಡಲೇ  ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿ ಟಿವಿ ವಿಡಿಯೋ ಆಧರಿಸಿ ರಾಘವೇಂದ್ರ ರಾವ್ ನನ್ನು ಬಂಧಿಸಿದ್ದಾರೆ.

ಇನ್ನು ಈತನನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಇದೇ ರೀತಿಯಲ್ಲಿ ಮತ್ತೊಂದು ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತನಿಂದ 120ಗ್ರಾಂನ ಎರಡು ಸರ ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!