ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮ್ಯೂಸಿಯಂಗೆ ಬೆಂಗಳೂರಿನಲ್ಲಿ ಚಿನ್ನದ ಉದ್ಯಮ ಮಾಡುತ್ತಿರುವ ಕುಟುಂಬ ಧರ್ಮಸ್ಥಳಕ್ಕೆ ಆಗಮಿಸಿ ಧರ್ಮಾಧಿಕಾರಿಗೆ 1984 ಮಾಡೆಲ್ ನ ಸ್ಕೂಟರ್ ಮತ್ತು ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು.

ಬೆಂಗಳೂರು ನಗರತ್ ಪೇಟೆಯಲ್ಲಿ ಮುನೋತ್ ಜ್ಯುವೆಲರಿ ಎಂಬ ಚಿನ್ನದ ವ್ಯಾಪಾರ ನಡೆಸುತ್ತಿರುವ ಗುಜರಾತ್ ನಿವಾಸಿ ಬಾಬು ಲಾಲ್ ಜೀ ಮತ್ತು ಕುಟುಂಬ ಸಮೇತ ಜ.29 ರಂದು ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವನ್ನು ಭೇಟಿ ಮಾಡಿ ನಂತರ 1984 ಇಸವಿಯ ಮೊಡೆಲ್ ನ ರನ್ನಿಂಗ್ ಕಡಿಷನ್ ಇರುವ ಬಜಾಜ್ ಕಂಪನಿಯ ಪ್ರಿಯಾ ಸ್ಕೂಟರ್ ಮತ್ತು ದಾಖಲೆ ಪತ್ರಗಳನ್ನು ಹಸ್ತಾಂತರ ಮಾಡಿದರು.

ಚಿನ್ನದ ವ್ಯಾಪಾರಿ ಬಾಬು ಲಾಲ್ ಜೀ ಅವರು 1984 ರಲ್ಲಿ ಹೊಸದಾಗಿ ಖರೀದಿಸಿ ಉಪಯೋಗಿಸುತ್ತಿದ್ದರು. ಕಳೆದ ಐದು ವರ್ಷಗಳಿಂದ ತನ್ನ ಮನೆಯಲ್ಲಿ ಸರಿಯಾದ ಸರ್ವಿಸ್ ಗಳನ್ನು ಮಾಡಿಸಿ ಇಟ್ಟುಕೊಂಡಿದ್ದರು. ಇದೀಗ ಧರ್ಮಸ್ಥಳಕ್ಕೆ ನೀಡಬೇಕೆಂದು ಕುಟುಂಬ ಸದಸ್ಯರು ನಿರ್ಧರಿಸಿದರು. ಅದರಂತೆ ಜ.29 ರಂದು ಕುಟುಂಬ ಸಮೇತ ಟೆಂಪೋ ಟ್ರಾವೆರ್ ನಲ್ಲಿ ಸ್ಕೂಟರ್ ಜೊತೆ ಅಗಮಿಸಿ ಪ್ರೀತಿಯಿಂದ ಧರ್ಮಾಧಿಕಾರಿಯವರಿಗೆ ಸ್ಕೂಟರ್ ಹಸ್ತಾಂತರ ಮಾಡಿದರು.



