Thursday, June 25, 2026
Homeಉದ್ಯಮದುಬಾರಿಯಾಯಿತು ಬಂಗಾರ: 46 ಸಾವಿರ ರೂ. ಗಡಿ ದಾಟಿದ ಗೋಲ್ಡ್ ರೇಟ್

ದುಬಾರಿಯಾಯಿತು ಬಂಗಾರ: 46 ಸಾವಿರ ರೂ. ಗಡಿ ದಾಟಿದ ಗೋಲ್ಡ್ ರೇಟ್

- Advertisement -
- Advertisement -

ಮುಂಬೈ: ಕಳೆದ ಹಲವು ದಿನಗಳಿಂದ ಚಿನ್ನದ ಬೆಲೆ, ಏರಿಕೆ ,ಇಳಿಕೆಯಾಗುತ್ತಿದೆ. ಮಂಗಳವಾರ ಚಿನ್ನ ಹಾಗೂ ಬೆಳ್ಳಿ ಬೆಲೆ ಮತ್ತೆ ಅಲ್ಪ ಏರಿಕೆ ಕಂಡಿದೆ. ದೇಶದಲ್ಲಿ ಗ್ರಾಂ ಚಿನ್ನಕ್ಕೆ 4,607ರೂ ಮತ್ತು ಕೆಜಿ ಬೆಳ್ಳಿ ಬೆಲೆ 48,370 ರೂ ದಾಖಲಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 44,250 ರೂ.ಇದ್ದು, ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 45,900 ರೂ. ಇದೆ. ಬೆಳ್ಳಿ ದರ ಕೆಜಿಗೆ 48,370 ರೂ. ಆಗಿದೆ.

ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,070 ರೂಪಾಯಿ ಆಗಿದೆ. ಬೆಳ್ಳಿ ದರ ಕೆಜಿಗೆ 48,370 ರೂಪಾಯಿ ಇದೆ.

ಅದೇ ರೀತಿ ಕೊಲ್ಕತ್ತಾದಲ್ಲಿ 10 ಗ್ರಾಂ ಆಭರಣ ಚಿನ್ನದ ಬೆಲೆ 45,900 ರೂ., ಚೆನ್ನೈನಲ್ಲಿ ಚಿನ್ನ 10 ಗ್ರಾಂಗೆ 45,120 ರೂ. ಇದೆ.

ಜಾಗತಿಕ ಮತ್ತು ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಮಂಗಳವಾರದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!