Thursday, June 25, 2026
Homeಕರಾವಳಿಮಂಗಳೂರುಪುತ್ತೂರು: ಈಶ್ವರಮಂಗಲದಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು

ಪುತ್ತೂರು: ಈಶ್ವರಮಂಗಲದಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು

- Advertisement -
- Advertisement -

ಪುತ್ತೂರು: ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಈಶ್ವರಮಂಗಲದಲ್ಲಿ ನಡೆದೆ.

ನೆಟ್ಟಣಿಗೆ ಮುಟ್ಟೂರು ಗ್ರಾ.ಪಂ. ಕಚೇರಿ ಬಳಿಯ ಮಹಾಬಲೇಶ್ವರ ಭಟ್ ಅವರ ಪತ್ನಿ ಶೋಭಾ ಅವರ ಮನೆಯಲ್ಲಿ ಕಳ್ಳತನವಾಗಿದೆ. ಪುತ್ತೂರು ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿ ಸಂಜೆ 7.30ಕ್ಕೆ ಮನೆಗೆ ಬಂದು ನೋಡಿದಾಗ ಮನೆಯ ಒಳಗೆ ಇದ್ದ ಗೋದ್ರೇಜ್‌ನ ಬೀಗವನ್ನು ಮುರಿದು ಅದರಲ್ಲಿದ್ದ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಒಳಗೆ ಇದ್ದ ಪರ್ಸನಲ್ಲಿದ್ದ ಸುಮಾರು 24 ಗ್ರಾಂ ತೂಕದ ಲಕ್ಷ್ಮೀ ಚೈನ್, ಪಟ್ಟೆಕಲ್ಲಿನ ಕಿವಿಯೋಲೆ ಮತ್ತು ಸುಮಾರು 5000 ರೂ. ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಮನೆಯ ಹಿಂಬದಿ ಬಾಗಿಲನ್ನು ತೆರೆದು ಒಳಪ್ರವೇಶಿಸಿ ಕಳ್ಳತನ ಮಾಡಿದ್ದು ಕಳ್ಳತನವಾದ ಒಟ್ಟು 31 ಗ್ರಾಂ ಚಿನ್ನದ ಮೌಲ್ಯ 1 ಲಕ್ಷ 20 ಸಾವಿರ ಆಗಬಹುದು ಎಂದು ಶೋಭಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!