ನವದೆಹಲಿ: ಕೊರೊನ ಸಂಕಟದಿಂದ ಬರಿದಾಗಿರುವ ಬೊಕ್ಕಸ ತುಂಬಿಕೊಳ್ಳಲು ಕೇಂದ್ರ ಸರ್ಕಾರ ಜನಸಾಮಾನ್ಯರ ಬಳಿ ಇರುವ ಅಕ್ರಮ ಚಿನ್ನದ ಮೇಲೆ ತೆರಿಗೆ (Tax) ಅಥವಾ ದಂಡ ವಿಧಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ 5 ವರ್ಷಗಳಿಂದ ಬಳಕೆಯಾಗದೆ ಮನೆಯಲ್ಲಿ ಮತ್ತು ದೇವಾಲಯಗಳಲ್ಲಿ ಇದ್ದ ಚೀನ್ನವನ್ನು ಬ್ಯಾಂಕಿನಲ್ಲಿ ಇಟ್ಟು ಬಡ್ಡಿ ನೀಡುವ ಯೋಜನೆ ರೂಪಿಸಿದ್ದ ಕೇಂದ್ರ ಸರ್ಕಾರ ಈಗ ‘ಅಕ್ರಮ ಚಿನ್ನ (Gold) ವನ್ನು ಸಕ್ರಮಗೊಳಿಸುವ’ ಯೋಜನೆ ಜಾರಿಗೆ ತರುವ ಚಿಂತನೆಯಲ್ಲಿದೆ ಎನ್ನಲಾಗುತ್ತಿದೆ.
ವಿಶ್ವದಲ್ಲೇ ಅತಿಹೆಚ್ಚು ಬಂಗಾರ ಖರೀದಿಸಿರುವ ದೇಶಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ. ಅನೇಕರು ತೆರಿಗೆಯನ್ನೇ ಕಟ್ಟದೆ ಸರ್ಕಾರಕ್ಕೆ ಕೋಟ್ಯಂತರ ರೂ. ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಬಂಗಾರದ ಬೇಟೆಗೆ ಸಜ್ಜಾಗಿದೆ.
ನೋಟುಗಳ ಅಮಾನೀಕರಣದಿಂದ ನಗದು ಮೂಲಕ ನಡೆಯುತ್ತಿದ್ದ ಗೋಲ್ಡ್ ಸ್ಮಗ್ಲಿಂಗ್ ಮೇಲೆ ಈಗಾಗಲೇ ಪರಿಣಾಮ ಬೀರಿದೆ. ಇದರ ಜೊತೆಗೆ ಮನೆಗಳಲ್ಲಿ ಇಟ್ಟುಕೊಂಡಿರುವ ಬಂಗಾರಕ್ಕೂ ಸರ್ಕಾರ ಹೊಸ ನಿಯಮಾವಳಿ ಜಾರಿಗೊಳಿಸುವ ಸಾಧ್ಯತೆ ಇದೆ.
ಕೊರೋನಾ ಶುರುವಾಗುವ ಮುನ್ನವೇ ದೇಶದ ಆರ್ಥಿಕತೆಯ ಕುಸಿತ ಆರಂಭವಾಗಿತ್ತು. ಅದು ಲಾಕ್‍ಡೌನ್ ಬಳಿಕ ಇನ್ನೂ ದುಸ್ಥಿತಿ ತಲುಪಿದೆ. ಆರ್ಥಿಕ ವಹಿವಾಟು ನಡೆಯದೆ ಜಿಎಸ್ ಟಿ ಸಂಗ್ರಹವೂ ಆಗುತ್ತಿಲ್ಲ. ಇದರಿಂದ ಕೇಂದ್ರ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಪರಿಣಾಮರಾಜ್ಯ ಸರ್ಕಾರಗಳಿಗೆ ನಿಯಮಾನುಸಾರ ಕೊಡಲೇಬೇಕಾದ ಜಿಎಸ್‍ಟಿ ಪರಿಹಾರದ ಪಾಲಿನ ಹಣವನ್ನೂ ಕೊಡಲಾಗುತ್ತಿಲ್ಲ
ಚಿನ್ನ ಕ್ಷಮಾದಾನ ಯೋಜನೆ ಎಂದೂ ಹೇಳಲಾಗುತ್ತಿರುವ ಈ ಯೋಜನೆಯ ಪ್ರಕಾರ, ಜನಸಾಮಾನ್ಯರು ತಮ್ಮ ಬಳಿ ಇರುವ ಚಿನ್ನದ ಬಗ್ಗೆ ತೆರಿಗೆ ಇಲಾಖೆಯ ಅಧಿಕಾರಿಗಳ ಎದುರು ಘೋಷಿಸಿಕೊಳ್ಳಬೇಕು. ದಾಖಲೆ ಇಲ್ಲದಿರುವ ಚಿನ್ನಕ್ಕೆ ತೆರಿಗೆ ಅಥವಾ ದಂಡವನ್ನು ಕಟ್ಟಿ ‘ಅಕ್ರಮವಾದ ಚಿನ್ನವನ್ನು ಸಕ್ರಮ ಮಾಡಿಕೊಳ್ಳಬೇಕು.
ಈ ಅಕ್ರಮ ಸಕ್ರಮ ಯೋಜನೆ ಅಥವಾ ಚಿನ್ನ ಕ್ಷಮಾದಾನ ಯೋಜನೆಯು ಪ್ರಾಥಮಿಕ ಹಂತದಲ್ಲಿದೆ. ಕೇಂದ್ರ ಹಣಕಾಸು ಇಲಾಖೆಯಿಂದ ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ಇಂಥದೊಂದು ಪ್ರಸ್ತಾಪ ಹೋಗಿದೆ. ಮತ್ತೊಮ್ಮೆ ಹಣಕಾಸು ಇಲಾಖೆ ಮತ್ತು ಪ್ರಧಾನ ಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಪ್ರಧಾನಿ ಮೋದಿ ಮುಂದೆ ಮಂಡಿಸುತ್ತಾರೆ. ಮೋದಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎನ್ನಲಾಗಿದೆ.
ಪ್ರಸ್ತುತ ದೇಶ ವಿಪರೀತ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಇದರಿಂದ ಹೊರಬರುವ ಮಾರ್ಗೊಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಬೇರೆ ಸಂಪನ್ಮೂಲ ಮೂಲಗಳು ಸಿಗದ ಹಿನ್ನೆಲೆಯಲ್ಲಿ ಜನಸಾಮಾನ್ಯರ ಚಿನ್ನಕ್ಕೆ ತೆರಿಗೆ ಮತ್ತು ದಂಡ ವಿಧಿಸಿ ಬೊಕ್ಕಸ ತುಂಬಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಇಂಥದೊಂದು ಪ್ರಸ್ತಾಪ ಈಗ ಕೇಂದ್ರ ಹಣಕಾಸು ಇಲಾಖೆಯಿಂದ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ರವಾನೆಯಾಗಿದೆ. ಅಂತಿಮವಾಗಿ ಜನಸಾಮಾನ್ಯರ ಚಿನ್ನದ ಮೇಲೆ ತೆರಿಗೆ ಮತ್ತು ದಂಡ ವಿಧಿಸುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟ ವಿಷಯವಾಗಿದೆ.
ನಿಮ್ಮ ಬಳಿ ಲೆಕ್ಕವಿಲ್ಲದ ಚಿನ್ನ ಇದೆಯೇ ? : ಕೇಂದ್ರದಿಂದ ಕಾದಿದೆ ಬಿಗ್ ಶಾಕ್..!
- Advertisement -
- Advertisement -
- Advertisement -
