Friday, June 5, 2026
Homeಅಪರಾಧಕಡಬದಲ್ಲಿ ಕಾಲೇಜಿಗೆ ಹೋದ ಅಪ್ರಾಪ್ತೆ ನಾಪತ್ತೆ: ಯುವಕನೊಂದಿಗೆ ತೆರಳಿರುವ ಶಂಕೆ

ಕಡಬದಲ್ಲಿ ಕಾಲೇಜಿಗೆ ಹೋದ ಅಪ್ರಾಪ್ತೆ ನಾಪತ್ತೆ: ಯುವಕನೊಂದಿಗೆ ತೆರಳಿರುವ ಶಂಕೆ

- Advertisement -
- Advertisement -

ಕಡಬ: ಕಾಲೇಜಿಗೆಂದು ತೆರಳಿಯ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ.

ಕಳಾರ ನಿವಾಸಿ ಹದಿನೇಳು ವರ್ಷದ ಯುವತಿಯು ನಿನ್ನೆ ಕಾಲೇಜಿಗೆಂದು ಮನೆಯಿಂದ ತೆರಳಿದ್ದಾಳೆ. ಸಂಜೆಯವರೆಗೂ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದರೂ ಯಾವುದೇ ಸುಳಿವು ಸಿಗದೇ ಇದ್ದಾಗ ಆಕೆಯ  ಮನೆಯವರು ಇಂದು ಕಡಬ ಠಾಣೆಗೆ ದೂರು ನೀಡಿದ್ದಾರೆ.

ಇನ್ನು ಸ್ಥಳೀಯ ನಿವಾಸಿ 24 ವರ್ಷದ ಯುವಕನೊಬ್ಬ ಕೂಡ ನಾಪತ್ತೆಯಾಗಿದ್ದು, ಇಬ್ಬರೂ ಜೊತೆಯಾಗಿ ತೆರಳಿರುವ ಸಂಶಯ ವ್ಯಕ್ತವಾಗಿದೆ. ಇದೀಗ ನಾಪತ್ತೆಯಾದವರ ಪತ್ತೆಗೆ ಕಡಬ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!