Friday, May 17, 2024
Homeಕರಾವಳಿಬೆಳ್ತಂಗಡಿ : ಸೈಕಲ್ ನಲ್ಲಿಯೇ ಪ್ರಪಂಚ ಸುತ್ತುವ ಜರ್ಮನಿ ವೃದ್ಧ ದಂಪತಿ: ಹೃದಯಾಘಾತವಾದರೂ ಛಲ ಬೀಡದೆ...

ಬೆಳ್ತಂಗಡಿ : ಸೈಕಲ್ ನಲ್ಲಿಯೇ ಪ್ರಪಂಚ ಸುತ್ತುವ ಜರ್ಮನಿ ವೃದ್ಧ ದಂಪತಿ: ಹೃದಯಾಘಾತವಾದರೂ ಛಲ ಬೀಡದೆ ಮತ್ತೆ ಯಾತ್ರೆ: ಬೆಳ್ತಂಗಡಿಯಲ್ಲಿ ಸಿಕ್ಕ ಜರ್ಮನಿ ದಂಪತಿ ಪ್ರಪಂಚ ಯಾತ್ರೆ ಬಗ್ಗೆ ಹೇಳಿದ್ದೇನು?

spot_img
- Advertisement -
- Advertisement -

ಬೆಳ್ತಂಗಡಿ : ವೃತ್ತಿಯಲ್ಲಿ ಇಬ್ಬರಿಗೂ ಕೆಲಸವಿತ್ತು. ಅದಲ್ಲದೇ ಮನೆ, ಕೈತುಂಬಾ ಸಂಬಳ ಕೂಡ ಇತ್ತು ಆದ್ರೆ ಇವರಿಗೆ ಜೀವನದಲ್ಲಿ ಸೈಕಲ್ ನಲ್ಲಿ ಪ್ರಪಂಚ ಸುತ್ತಿ ಅಲ್ಲಿನ ಪರಿಸ್ಥಿತಿ ಬಗ್ಗೆ ಅಧ್ಯಯನ ಮಾಡಿ ತಿಳಿದುಕೊಳ್ಳಬೇಕೆಂದು ಆಸೆ ಹುಟ್ಟಿಕೊಂಡಿದ್ದು ಅದರಂತೆ ಪ್ರಪಂಚ ಸುತ್ತಲು ನಿರ್ಧರಿಸಿ ಮನೆ, ಆಸ್ತಿಗಳನ್ನು ಮಾರಿ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ‌ದ್ರು. 15 ವರ್ಷ ಹಳೆಯ ತಮ್ಮ ಸೈಕಲನ್ನು ರಿಪೇರಿ ಮಾಡಿಸಿ ಕಳೆದ 9 ತಿಂಗಳ ಹಿಂದೆ ತಮ್ಮ ಊರಿನಿಂದ ಪ್ರಪಂಚ ಸುತ್ತಲೂ ಆರಂಭಸಿದರು. ಈ ನಡುವೆ ಪತಿಗೆ ಹೃದಯಾಘಾತವಾಯಿತು. ಇದಕ್ಕೆ ಚಿಕಿತ್ಸೆ ಪಡೆದುಕೊಂಡು ಮತ್ತೆ ಸೈಕಲ್ ಹಿಡಿದು ಪ್ರಯಾಣ ಬೆಳೆಸಿದ ಜರ್ಮನಿ ದಂಪತಿಗಳ ಜೀವನದ ಕಥೆ‌ಯನ್ನು ಮಹಾಎಕ್ಸ್ ವೆಬ್ ಸೈಟ್ ಬಿಚ್ಚಿಡುತ್ತದೆ.

ದಂಪತಿಗಳ ಕುಟುಂಬ : ಜರ್ಮನ್ ದೇಶದ ಬರ್ಲಿನ್ ಪ್ರಾಂತ್ಯದ ನಿವಾಸಿಯಾದ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಪತಿ ಕ್ಲಾಸ್ (59) ವರ್ಷ ಮತ್ತು ಪ್ರವಾಸಿಗರ ಗೈಡ್  ಹಾಗೂ ಛಾಯಾಗ್ರಾಹಕಿಯಾಗಿದ್ದ ಪತ್ನಿ ಆಂಡ್ರಿಯಾ(54) ವರ್ಷದ ದಂಪತಿಗಳು. ಇವರಿಗೆ 2007 ರಲ್ಲಿ ಮದುವೆಯಾಗಿ ಒಬ್ಬ ಜೋನಸ್ ಎಂಬ (32) ವರ್ಷದ ಮಗ ಇದ್ದಾನೆ ಆತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಅದಲ್ಲದೆ ಆತ ಕೂಡ ಪ್ರಪಂಚ ಸುತ್ತಲು ಹೋಗಿದ್ದಾನೆ.

ಪ್ರಪಂಚ ಸುತ್ತಲು ಯೋಜನೆ: ನಮಗೆ ವಿದೇಶಗಳ ವಾಸ್ತು ಪರಿಸ್ಥಿತಿಗಳನ್ನು ನೋಡಿ ಅಲ್ಲಿಯ ಬಗ್ಗೆ ಎಲ್ಲವನ್ನೂ ಅಧ್ಯಯನ ಮಾಡಬೇಕು ಅಂತ ನಿರ್ಧರಿಸಿಕೊಂಡು ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಪ್ರಪಂಚ ಸುತ್ತಲು ಯೋಜನೆ ಹಾಕಿಕೊಂಡು ಜರ್ಮನಿಯಲ್ಲಿರುವ ಜಾಗ ,ಮನೆಯನ್ನು ಮಾರಾಟ ಮಾಡಿ ತಮ್ಮ 15 ವರ್ಷದ ಹಳೆಯ ಸೈಕಲ್ ರಿಪೇರಿ ಮಾಡಿಸಿ 2022 ರ ಮೇ 1 ರಂದು ಜರ್ಮನ್ ದೇಶದಿಂದ ಸೈಕಲ್ ಮೂಲಕ ಯಾತ್ತೆ ಆರಂಬಿಸಿದ್ದೇವೆ‌‌. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಪ್ರದೇಶಕ್ಕೆ 7,034 ಕಿ.ಮೀ ಬಂದಿದ್ದು. ಈ ಸೈಕಲ್ ಯಾತ್ರೆ ಆರಂಭಿಸಿ 9 ತಿಂಗಳು ಮುಗಿಯಿತು ಎನ್ನುತ್ತಾರೆ ಪತ್ನಿ ಆಂಡ್ರಿಯಾ.

ಸೈಕಲ್ ನಲ್ಲಿರುವ ವಸ್ತುಗಳು: ನಮ್ಮ ಇಬ್ಬರ ಎರಡು ಸೈಕಲ್ ನಲ್ಲಿ ಪ್ರಥಮ ಚಿಕಿತ್ಸೆಯ ಕಿಟ್ , ರಾತ್ರಿ ಮಲಗಳು ಟೆಂಟ್ ಪರಿಕರ, ಬಟ್ಟೆಗಳ ಕಿಟ್, ನೀರಿನ ಚಾಟಲ್ ಇಡುವ ವ್ಯವಸ್ಥೆ ,ಅಡುಗೆ ಮಾಡಲು ಪಾತ್ರೆಗಳು, ಸೈಕಲ್ ರಿಪೇರಿಯ ಕಿಟ್,  ಕಿ.ಮೀ ಸಂಚರಿಸುವ ಡಿಜಿಟಲ್ ರೀಡರ್, ಕ್ಯಾಮರಾ ಇಟ್ಟುಕೊಂಡು ಪ್ರಯಾಣ ಮಾಡುತ್ತಿದ್ದೇವೆ ಅಂತ ದಂಪತಿಗಳು ಮಹಾಎಕ್ಸ್ ವೆಬ್ ಸೈಟ್ ಗೆ ವಿವರಿಸಿದ್ದಾರೆ.

ಪ್ರಪಂಚದ ಯಾವೆಲ್ಲ ಸ್ಥಳಗಳಲ್ಲಿ ಯಾತ್ರೆ ಹೋಗಲಿದ್ದಾರೆ:  ದಂಪತಿಗಳು ಜರ್ಮನಿ ಮೂಲಕ ಆರಂಭವಾದ ಸೈಕಲ್ ಯಾತ್ರೆ ಪೋಲ್ಯಾಂಡ್ – ರುಮ್ಯಾನಿಯಾ-ಬುರ್ಗೆರಿಯಾ- ಜಾರ್ಜಿಯಾ- ಅರ್ಮೆನಿಯಾ – ಇರಾನ್- ದುಬೈ – ಓಮನ್ ನಿಂದ ಶಿಪ್ ಮೂಲಕ ಮುಂಬೈಗೆ ಅಗಮಿಸಿ ನಂತರ ಸೈಕಲ್ ಮೂಲಕ ಗೋವಾ ರಸ್ತೆಯಾಗಿ ಮಂಗಳೂರಿಗೆ ಬಂದು ಸೈಕಲ್ ಮೂಲಕ ಚೆನೈಗೆ ಹೋಗಿ ಅಲ್ಲಿಂದ ಶಿಪ್ ಮೂಲಕ ಶ್ರೀಲಂಕಾ ಹೋಗಿ ವಿಯೆಟ್ನಾಂ ಮೂಲಕ ತಮ್ಮ ಜರ್ಮನಿ ದೇಶ ತಲುಪಲಿದ್ದಾರೆ. ಸೈಕಲ್ ಏನಾದರೂ ಸಮಸ್ಯೆಯಾದರೆ ಅದಕ್ಕೆ ಸಂಬಂಧಿಸಿದ ಪರಿಕರಗಳು ನಮ್ಮಲ್ಲಿ ಇದ್ದು.ಇಲ್ಲವಾದರೆ ಸೈಕಲ್ ರಿಪೇರಿ ಮಾಡುವ ಅತ್ಮೀಯರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡು ನಂತರ ತೊಂದರೆ ಸರಿಪಡಿಸಿಕೊಳ್ಳುತ್ತಾರೆ.

ಪತಿಗೆ ಗೋವಾದಲ್ಲಿ ಹೃದಯಾಘಾತ: ಗೋವಾದಲ್ಲಿ ಪತಿ ಕ್ಲಾಸ್ ಗೆ ಹೃದಯಾಘಾತವಾಗಿದೆ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಸರ್ಜರಿ ಮಾಡಿಸಿಕೊಂಡು ನೇರ ಸೈಕಲ್ ಮೂಲಕ ಮಂಗಳೂರಿಗೆ ಅಗಮಿಸಿ ಎಜೆ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿ ಯಾವುದೇ ತೊಂದರೆ ಇಲ್ಲ ಎಂದು ವೈದರು ತಿಳಿಸಿದ ಬಳಿಕ ಬೆಳ್ತಂಗಡಿ ಮೂಲಕ ಚಾರ್ಮಾಡಿ ಘಾಟ್ ರಸ್ತೆಯಾಗಿ ಸೈಕಲ್ ಯಾತ್ರೆ ಮುಂದುವರಿಸಿದ್ದಾರೆ. ರಸ್ತೆಯಲ್ಲಿ ಹೋಗುವಾಗ ಏನಾದರೂ ಆಯಾಸವಾದಲ್ಲಿ ಕೆಲ ಗಂಟೆಗಳ ಕಾಲ ನಿದ್ರೆ ಮಾಡಿ ನಂತರ ಸೈಕಲ್ ಯಾತ್ರೆ ಮುಂದುವರಿಸುತ್ತೇವೆ ಎಂದು ಪತ್ನಿ ಆಂಡ್ರಿಯಾ ತಿಳಿಸಿದ್ದಾರೆ.

ಎರಡು ವರ್ಷ ಸೈಕಲ್ ಯಾತ್ರೆ ಹೋಗಲಿರುವ ದಂಪತಿಗಳು: ಎರಡು ವರ್ಷ ಬರ್ಲಿನ್ ನಿಂದ  ಈಜಿಪ್ಟ್ ಗೆ ಸೈಕಲ್ ಯಾತ್ರೆ ಮಾಡಿ ಮುಗಿಸಿದ್ದೇವೆ. ಈಗ ನಾವು 9 ತಿಂಗಳಿಂದ ಯಾತ್ರೆ ಆರಂಭಿಸಿದ್ದೇವೆ. ಇನ್ನೂ ನಮ್ಮ ಯಾತ್ರೆ ಸುಮಾರು ಎರಡು ವರ್ಷ ಇರಬಹುದು ಅಂತ ಆಂಡ್ರಿಯಾ ಮಾಹಿತಿ ನೀಡಿದ್ದಾರೆ. ಇನ್ನೂ ಇರಾನ್ ನಲ್ಲಿ ಕ್ರಾಂತಿ ಆಗುತ್ತಿರುವ ಹಿನ್ನಲೆಯಲ್ಲಿ ಅಲ್ಲಿಯ ಸರಕಾರ ನಮಗೆ ಸೈಕಲ್ ಯಾತ್ರೆಯನ್ನು ನಿಷೇಧ ಮಾಡಿದ ಕಾರಣ ವಿಮಾನ ಪ್ರಯಾಣ ಮಾಡಬೇಕಾಗಿ ಬಂತು ಎಂದು ಕಹಿ ಘಟನೆ ಒಂದನ್ನು ವಿವರಿಸಿದರು‌.

ಭಾರತ ದೇಶದ ಮತ್ತು ಕರಾವಳಿಗರ ಬಗ್ಗೆ ದಂಪತಿಗಳಿಂದ ಮೆಚ್ಚುಗೆ ಮಾತು: ಬರ್ಲಿನ್ ಮಾಧ್ಯಮಗಳು  ಭಾರತದ ಬಗ್ಗೆ ಹೇಳುವ ವಿಷಯಗಳನ್ನು ನಂಬಬೇಡಿ. ಸ್ವತಃ ಭಾರತಕ್ಕೆ ಹೋಗಿ ಅಲ್ಲಿಯ ಸುಂದರ ಅನುಭವಗಳನ್ನು ಪಡೆಯಿರಿ.ನಾವು ಭಾರತಕ್ಕೆ ಬಂದು ಈ ಅನುಭವವನ್ನು ಹೊಂದಿದ್ದರಿಂದ ನಾವು ತುಂಬಾ ಅದೃಷ್ಟವಂತರು. ಭಾರತೀಯರು ಒಳ್ಳೆಯ ಜನರು‌. ಒಳ್ಳೆಯ ಮನಸ್ಸಿನವರು.ಇಲ್ಲಿ ಒಳ್ಳೆಯ ದೃಶ್ಯ ವಾತಾವರಣ, ಉದ್ಯಾನವನ,ಕಲೆ,ವಾಸ್ತುಶಿಲ್ಪ ಎಲ್ಲಾ ನಮಗೆ ತುಂಬಾ ಇಷ್ಟವಾಯಿತು.ಇಲ್ಲಿಯ ಜನರು ತುಂಬಾ ಸಹಾಯ ಮಾಡುವ ಗುಣ ತುಂಬಾ ಇಷ್ಟ. ಜನರು ತುಂಬಾ ಕುತೂಹರಿಗಳು. ಪ್ರವಾಸಿಗರಿಗೆ ಯಾವುದೇ ತೊಂದರೆ ಪಡಿಸುವುದಿಲ್ಲ. ಅದರಲ್ಲೂ ಕರಾವಳಿ ಪ್ರದೇಶದ ಜನರು ತುಂಬಾ ಸಹಾಯ ಪ್ರವೃತ್ತಿ ಜನರು. ನಮಗೆ ಯಾವುದೇ ರೀತಿಯ ಸಹಾಯ ಮಾಡಲು ಮುಂದೆ ಬರುತ್ತಾರೆ ಎಂದು ದಂಪತಿಗಳು ಹೇಳುತ್ತಾರೆ. ಬೆಳ್ತಂಗಡಿಯಲ್ಲಿ ಮಹಾಎಕ್ಸ್ ವೆಬ್ ಸೈಟ್ ತಂಡಕ್ಕೆ ದಂಪತಿಗಳು ಸಿಕ್ಕಿ ಜೀವನದ ಮತ್ತು ಸೈಕಲ್ ಯಾತ್ರೆಯ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಹಂಚಿಕೊಂಡು ಮಾತಾನಾಡಿದರು.

- Advertisement -
spot_img

Latest News

error: Content is protected !!