- Advertisement -
- Advertisement -
ಬಂಟ್ವಾಳ: ಕೋಳಿ ಅಂಕ ನಡೆಯುತ್ತಿದ್ದ ಸ್ಥಳದಲ್ಲಿ ಹಾಕಲಾಗಿದ್ದ ವೀಕ್ಷಣಾ ಗ್ಯಾಲರಿ ಕುಸಿದು ಬಿದ್ದು ಕೆಲವರು ಗಾಯಗೊಂಡ ಘಟನೆ ಕಲ್ಲಡ್ಕ ಸಮೀಪದ ಸುಧೇಕಾರು ಎಂಬಲ್ಲಿ ಬುಧವಾರ ನಡೆದಿದೆ.
ಕೋಳಿ ಅಂಕ ನಡೆಯುತ್ತಿದ್ದ ಜಾಗದಲ್ಲಿ ಎರಡು ಬದಿ ಗ್ಯಾಲರಿ ಅಳವಡಿಸಲಾಗಿತ್ತು. ಈ ವೇಳೆ ಒಂದು ಬದಿ ಗ್ಯಾಲರಿ ಕುಸಿತಗೊಂಡಿದೆ. ಇದರಿಂದಾಗಿ ನಾಲ್ವರು ಗಾಯಗೊಂಡಿದ್ದು, ಒಬ್ಬ ವ್ಯಕ್ತಿ ಕಾಲಿಗೆ ಗಂಭೀರ ಗಾಯಗೊಂಡಿದೆ. ಈ ಕೋಳಿ ಅಂಕಕ್ಕೆ ಪೊಲೀಸರಿಂದ ಪರವಾನಿಗೆ ಪಡೆಯದ ಹಿನ್ನೆಲೆಯಲ್ಲಿ ಆಯೋಜಕರು ಕೂಡಲೇ ಕೋಳಿ ಅಂಕ ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ
- Advertisement -