Tuesday, May 21, 2024
Homeತಾಜಾ ಸುದ್ದಿಕಲ್ಲುಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಪೋಟ-ಛಿದ್ರವಾಗಿ ಬಿದ್ದ ದೇಹದ ಭಾಗಗಳು!…ಬಿಹಾರ ಮೂಲದ 15 ಕಾರ್ಮಿಕರು ಬಲಿ

ಕಲ್ಲುಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಪೋಟ-ಛಿದ್ರವಾಗಿ ಬಿದ್ದ ದೇಹದ ಭಾಗಗಳು!…ಬಿಹಾರ ಮೂಲದ 15 ಕಾರ್ಮಿಕರು ಬಲಿ

spot_img
- Advertisement -
- Advertisement -

ಶಿವಮೊಗ್ಗ: ಇಲ್ಲಿನ ಕಲ್ಲುಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಪೋಟದಿಂದ ಭಾರೀ ಅನಾಹುತ ಘಟಿಸಿದೆ. ಸ್ಪೋಟದ ತೀವ್ರತೆಗೆ 15 ಕಾರ್ಮಿಕರು ಬಲಿಯಾಗಿದ್ದು ಲಾರಿಯಲ್ಲಿದ್ದ ಕಾರ್ಮಿಕರ ದೇಹಗಳು ಛಿದ್ರವಾಗಿದೆ. ರುಂಡ , ಮುಂಡಗಳು ಸಿಕ್ಕ ಸಿಕ್ಕಲ್ಲಿ ಬಿದ್ದಿವೆ. ಕಾರ್ಮಿಕರ ಕಾಲು, ದೇಹದ ಭಾಗಗಳು ಛಿದ್ರವಾಗಿದ್ದು ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗೂ ಭಾರೀ ಸ್ಪೋಟದ ತೀವ್ರತೆಯ ಸದ್ದು ಕೇಳಿದೆ.ಆರಂಭದಲ್ಲಿ ಇದನ್ನು ಭೂಕಂಪನ ಎಂದು ಭಾವಿಸಲಾಗಿತ್ತು.

,

ಶಿವಮೊಗ್ಗ ಸಮೀಪದ ಹುಣಸೋಡು ಬಳಿ ಕಲ್ಲು ಕ್ವಾರಿಯಲ್ಲಿ ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡಿದೆ. ಬಿಹಾರ ಮೂಲದ 15ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಾರ್ಮಿಕರ ದೇಹಗಳು ಗುರುತು ಸಿಗಲಾರದಷ್ಟು ಛಿದ್ರವಾಗಿವೆ. ಲಾರಿಯಲ್ಲಿ 50 ಕ್ಕೂ ಹೆಚ್ಚು ಜಿಲೆಟಿನ್ ಬಾಕ್ಸ್ ಗಳಿದ್ದವು ಎಂದು ವರದಿಯಾಗಿದೆ. ಸದ್ಯ ಐವರು ಕಾರ್ಮಿಕರ ಮೃತದೇಹಗಳು ಪತ್ತೆಯಾಗಿದ್ದು, ಉಳಿದವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

,

ಇಂದು ಇಡೀ ಭಾರತದಲ್ಲಿ ಭೂಕಂಪ ಆದ ಯಾವುದೇ ರೆಕಾರ್ಡ್ ಆಗಿಲ್ಲ ಎಂದು ಭೂಗರ್ಭ ಶಾಸ್ತ್ರಜ್ಞ ಎಚ್.ಎಸ್.ಎಂ. ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ. ಇಡೀ ವಿಶ್ವದಲ್ಲಿ ಗ್ರೀಸ್ ನಲ್ಲಿ ಭೂಕಂಪ ಆಗಿದ್ದು ಹೊರತು ಮತ್ಯಾವುದೂ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

- Advertisement -
spot_img

Latest News

error: Content is protected !!