Thursday, May 9, 2024
Homeತಾಜಾ ಸುದ್ದಿಬಿಗ್ ಬಾಸ್' ಮನೆಯಿಂದ ಕಿರುತೆರೆ ನಟಿ 'ಗೀತಾ ಭಟ್' ಔಟ್ ? 'ಬ್ರಹ್ಮಗಂಟು' ನಟಿಯ ಆಟ...

ಬಿಗ್ ಬಾಸ್’ ಮನೆಯಿಂದ ಕಿರುತೆರೆ ನಟಿ ‘ಗೀತಾ ಭಟ್’ ಔಟ್ ? ‘ಬ್ರಹ್ಮಗಂಟು’ ನಟಿಯ ಆಟ ಅಂತ್ಯ..

spot_img
- Advertisement -
- Advertisement -

ಬೆಂಗಳೂರು: ಕಿರುತೆರೆ ಪ್ರೇಕ್ಷಕರ ನೆಚ್ಚಿನ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಆರಂಭವಾಗಿ ಮೂರನೇ ವಾರ ಕಳೆಯುತ್ತಿದೆ. ಮೂರನೇ ವಾರದ ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಿಂದ ಕಿರುತೆರೆ ನಟಿ ಗೀತಾ ಭಟ್ ಹೊರಬಿದ್ದಿದ್ದಾರೆ ಎನ್ನುವ ಸುದ್ದಿ ಬಲ್ಲ ಮೂಲಗಳಿಂದ ಬಂದಿದೆ.

ಮೊದಲ ವಾರ ಬಿಗ್ ಬಾಸ್ ಮನೆಯಿಂದ ಧನಶ್ರೀ ಔಟ್ ಆಗಿದ್ದರು. ಕಳೆದ ವಾರ ಅಂದರೆ ಎರಡನೇ ವಾರ ನಿರ್ಮಲಾ ಚೆನ್ನಪ್ಪ ಹೊರಬಿದ್ದಿದ್ದರು. ಇದೀಗ ಮೂರನೇ ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಿಂದ ನಟಿ ಗೀತಾ ಭಟ್ ಹೊರಬಿದ್ದಿದ್ದಾರೆ ಎನ್ನಲಾಗುತ್ತಿದೆ. ‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನೆ ಮಾತಾಗಿರುವ ಜನಪ್ರಿಯ ಸೀರಿಯಲ್ ನಟಿ ಗೀತಾ ಭಟ್ ಬಿಗ್ ಬಾಸ್ ಮನೆಗೆ 9 ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದರು. ಇದೀಗ ಮೂರೇ ವಾರಕ್ಕೆ ದೊಡ್ಮನೆಯಿಂದ ಹೊರಬಿದ್ದಿದ್ದಾರೆ.

ಈ ವಾರದ ನಾಮಿನೇಷನ್​ ಪಟ್ಟಿಯಲ್ಲಿ ಶಮಂತ್​ ಬ್ರೋ ಗೌಡ, ನಿಧಿ ಸುಬ್ಬಯ್ಯ, ಗೀತಾ ಭಾರತಿ ಭಟ್​, ರಘು ಗೌಡ, ಅರವಿಂದ್ ಕೆ.ಪಿ., ವಿಶ್ವನಾಥ್​, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್​ ಸಂಬರಗಿ ಇದ್ದರು. 9 ಸ್ಪರ್ಧಿಗಳ ಪೈಕಿ ಒಬ್ಬರು ಬಿಗ್​ ಬಾಸ್​ ಮನೆಯಿಂದ ಭಾನುವಾರ ಹೊರ ಹೋಗುವುದು ಖಚಿತ ಆಗಿತ್ತು. ಅರವಿಂದ್, ದಿವ್ಯಾ ಸುರೇಶ್​, ಪ್ರಶಾಂತ್​ ಸಂಬರಗಿ, ನಿಧಿ ಸುಬ್ಬಯ್ಯ ಸೇಫ್​ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಶನಿವಾರವೇ (ಮಾ.20)​ ಘೋಷಣೆ ಮಾಡಿದ್ದರು. ಇನ್ನುಳಿದ ಸ್ಪರ್ಧಿಗಳಾದ ಶಮಂತ್​, ಗೀತಾ, ರಘು ಗೌಡ, ವಿಶ್ವನಾಥ್, ದಿವ್ಯಾ ಉರುಡುಗ ಪೈಕಿ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬ ಕೌತುಕ ಮನೆ ಮಾಡಿತ್ತು. ಈಗ ಗೀತಾ ಹೊರಹೋಗಿರುವ ಸುದ್ದಿ ಕೇಳಿಬಂದಿದೆ.

- Advertisement -
spot_img

Latest News

error: Content is protected !!