- Advertisement -
- Advertisement -
ಮಂಗಳೂರು: ಮೊಗವೀರ ಮಹಾಸಭಾ ಸಂಘದ ಆಡಳಿತದಲ್ಲಿನ ಭಿನ್ನಾಭಿಪ್ರಾಯದಿಂದಾಗಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆದೆ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬೋಳೂರು ಬಳಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು,ನವೀನ್ ಸಾಲ್ಯಾನ್ ಎಂಬವರ ಮೇಲೆ ಕಬ್ಬಿಣದ ರಾಡ್ ನಿಂದ ಇಬ್ಬರು ಹಲ್ಲೆ ನಡೆಸಿದ್ದಾರೆ.
ದೇವದಾಸ್ ಬೋಳೂರು ಮತ್ತು ಪುತ್ರ ಸಾಯಿ ಕಿರಣ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದು, ಗಾಯಾಳು ನವೀನ್ ಸಾಲ್ಯಾನ್ ರನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದೆ.ಹಲ್ಲೆ ಅರೋಪಿಗಳಾದ ತಂದೆ ದೇವದಾಸ್ ಬೋಳೂರು ಮತ್ತು ಮಗ ಸಾಯಿ ಕಿರಣ್ ಬಂಧಿಸಲ್ಪಟ್ಟಿದ್ದಿದ್ದಾರೆ.
ಹಲ್ಲೆ ಘಟನೆ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -