Saturday, June 6, 2026
Homeಕರಾವಳಿಕಡಬ: ಗ್ಯಾಸ್‌ ಟ್ಯಾಂಕರ್‌ ಹೊತ್ತೊಯ್ಯುತ್ತಿದ್ದ ಗೂಡ್ಸ್‌ ರೈಲಿನಲ್ಲಿ ಅನಿಲ ಸೋರಿಕೆ: ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಪರಿಶೀಲನೆ

ಕಡಬ: ಗ್ಯಾಸ್‌ ಟ್ಯಾಂಕರ್‌ ಹೊತ್ತೊಯ್ಯುತ್ತಿದ್ದ ಗೂಡ್ಸ್‌ ರೈಲಿನಲ್ಲಿ ಅನಿಲ ಸೋರಿಕೆ: ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಪರಿಶೀಲನೆ

- Advertisement -
- Advertisement -

ಕಡಬ: ಗ್ಯಾಸ್‌ ಟ್ಯಾಂಕರ್‌ ಹೊತ್ತೊಯ್ಯುತ್ತಿದ್ದ ಗೂಡ್ಸ್‌ ರೈಲಿನಲ್ಲಿ ಅನಿಲ ಸೋರಿಕೆಯಾಗ್ತಿದೆ ಎಂಬ ಮಾಹಿತಿಯ ಮೇರೆಗೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ ಘಟನೆ ಇಂದು ಬೆಳಗ್ಗೆ ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಮಂಗಳೂರಿನಿಂದ ಬಂದಿದ್ದ ಗೂಡ್ಸ್‌ ರೈಲಿನಲ್ಲಿ ಅನಿಲ ಸೋರಿಕೆಯಾಗ್ತಿದೆ ಎಂಬ ಮಾಹಿತಿ ಸಿಕ್ತಿದ್ದಂತೆ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಹಾಗೇ ಗ್ಯಾಸ್‌ ಕಂಪನಿಯು ಸ್ಥಳಕ್ಕೆ ಎಮರ್ಜೆನ್ಸಿ ರೆಸ್ಪಾನ್ಸ್ ತಂಡವನ್ನು ಕಳುಹಿಸಿದೆ. ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!