Wednesday, June 3, 2026
Homeಕರಾವಳಿಮಂಗಳೂರು ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲಿನಲ್ಲಿದ್ದ 3.16 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶ

ಮಂಗಳೂರು ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲಿನಲ್ಲಿದ್ದ 3.16 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶ

- Advertisement -
- Advertisement -

ಮಂಗಳೂರು ರೈಲು ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲಿನಲ್ಲಿದ್ದ 3.16 ಲಕ್ಷ ರೂಪಾಯಿ ಮೌಲ್ಯದ 6.3 ಕೆ.ಜಿ ಗಾಂಜಾವನ್ನು ರೈಲ್ವೇ ರಕ್ಷಣಾ ಪಡೆ ವಶಪಡಿಸಿಕೊಂಡಿದೆ.

ರೈಲು ನಿಲ್ದಾಣದ ಎರಡನೇ ಫ್ಲ್ಯಾಟ್‌ ಫಾರಂನಲ್ಲಿ ಗುರುವಾರ ಬೆಳಗ್ಗೆ 11.15ರ ವೇಳೆಗೆ ಕಾರವಾರ-ಯಶವಂತಪುರ  ಎಕ್ಸ್ ಪ್ರೆಸ್‌ ರೈಲಿನಲ್ಲಿ ನಿಯಮಿತ ತಪಾಸಣೆ ವೇಳೆ  ಅನಾಮಧೇಯ ಬ್ಯಾಗ್‌ನಲ್ಲಿ 3,16,650 ರೂ. ಮೌಲ್ಯದ 6.333 ಕೆ.ಜಿ. ತೂಕದ ಒಣ ಗಾಂಜಾ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ. ಮಂಗಳೂರು ಪೂರ್ವ ಅಬಕಾರಿ ವಿಭಾಗದ‌ಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಪಾಲ್ಘಾಟ್‌ ವಿಭಾಗದ ಸಿಐಬಿ ಮುಖ್ಯ ನಿರೀಕ್ಷಕ ಎನ್‌. ಕೇಸವದಾಸ್‌, ಮಂಗಳೂರು ಜಂಕ್ಷನ್‌ ಇನ್‌ಸ್ಪೆಕ್ಟರ್‌ ಮನೋಜ್‌ ಕುಮಾರ್‌ ಯಾದವ್‌, ಸಿಐಬಿ ಎಸ್‌ಐ ದೀಪಕ್‌ ಎ.ಪಿ., ಅಜಿತ್‌ ಅಶೋಕ್‌ ಎ.ಪಿ, ಎಎಸ್‌ಐ ಸಾಜು ಕೆ., ಎಸ್‌.ಎಂ. ರವಿ., ಮಂಗಳೂರು ಜಂಕ್ಷನ್‌ ಎಎಸ್‌ಐ ಕೆ. ಶಶಿ, ಸಿಐಬಿ ಹೆಡ್‌ ಕಾನ್‌ಸ್ಟೆಬಲ್‌ ಎನ್‌. ಅಶೋಕ್‌, ಅಜೀಶ್‌ ಒ.ಕೆ., ಜಂಕ್ಷನ್‌ ಕಾನ್‌ಸ್ಟೆಬಲ್‌ ಟಿ.ಪಾಂಡುರಂಗ ಭಾಗವಹಿಸಿದ್ದರು.

- Advertisement -

Latest News

error: Content is protected !!