Sunday, June 29, 2025
Homeಕರಾವಳಿಉಡುಪಿಉಡುಪಿ ಮಂಗಳೂರಿನಲ್ಲಿ 6 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿ ಆರಂಭ!

ಉಡುಪಿ ಮಂಗಳೂರಿನಲ್ಲಿ 6 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ತರಗತಿ ಆರಂಭ!

spot_img
- Advertisement -
- Advertisement -

ಮಂಗಳೂರು: 6 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪೂರ್ಣಾವಧಿ ದೈಹಿಕ ತರಗತಿಗಳು ಅಕ್ಟೋಬರ್ 4 ರ ಸೋಮವಾರದಿಂದ ಉಡುಪಿ ಹಾಗು ಮಂಗಳೂರು ಜಿಲ್ಲೆಗಳಲ್ಲಿ ಸುಮಾರು ಒಂದು ವರ್ಷ ಒಂಬತ್ತು ತಿಂಗಳ ಅಂತರದ ನಂತರ ಆರಂಭವಾಗಲಿವೆ.

ಇದುವರೆಗೆ ಕೋವಿಡ್‌ ಕಾರಣದಿಂದ ಮಧ್ಯಾಹ್ನದ ವರೆಗೆ ಅಥವಾ ಕೆಲವು ತರಗತಿಗಳು ಅಪರಾಹ್ನ ಮಾತ್ರ ನಡೆಯುತ್ತಿದ್ದವು.ಕೋವಿಡ್‌ ಸೋಂಕು ತಡೆಯಲು ಸರಕಾರ ಹೊರಡಿಸಿದ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಿ ತರಗತಿಗಳನ್ನು ನಡೆಸಬೇಕು ಎಂದು ರಾಜ್ಯ ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ, ಕರ್ನಾಟಕದ ಉಪಾಧ್ಯಕ್ಷ ಮಂಜುನಾಥ ಅವರು ಪ್ರತಿಕ್ರಿಯಿಸಿ, 6ರಿಂದ 10ನೇ ತರಗತಿ ವರೆಗೆ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭವಾಗಿರುವುದರಿಂದ ಶಾಲಾ ಆಡಳಿತ ಮಂಡಳಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ಸಮುದಾಯಕ್ಕೆ ಅನುಕೂಲವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದು ಬಹಳ ಅಗತ್ಯವಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.



ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಡಿಡಿಪಿಐಗಳಾದ ಮಲ್ಲೇಸ್ವಾಮಿ ಮತ್ತು ಎನ್ ಎಚ್ ನಾಗೂರ ಅವರು, ನಾವು ಪೂರ್ಣ ಸಮಯ ಶಾಲೆಗಳನ್ನು ಆರಂಭಿಸಲು ಸರ್ಕಾರದಿಂದ ಆದೇಶಗಳನ್ನು ಸ್ವೀಕರಿಸಿದ್ದೇವೆ. ಉಪ ಆಯುಕ್ತರಿಂದ ಅನುಮತಿ ಪಡೆದ ನಂತರ ತರಗತಿಗಳನ್ನು ಆರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.1 ರಿಂದ 5 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಆರಂಭಿಸಲು ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ‘ಬಿಸಿಯೂಟ’ ಯೋಜನೆಯಡಿ ನೀಡಲು ಅಧಿಕೃತ ಆದೇಶವನ್ನು ನೀಡುವ ಸಾಧ್ಯತೆಯಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!