Sunday, July 6, 2025
Homeಉದ್ಯಮಇತಿಹಾಸ ನಿರ್ಮಿಸಿದ ಪೆಟ್ರೋಲ್ ,ಡೀಸೆಲ್ ಬೆಲೆ : ಇಂಧನ ದರ ಮತ್ತಷ್ಟು ಏರಿಕೆ

ಇತಿಹಾಸ ನಿರ್ಮಿಸಿದ ಪೆಟ್ರೋಲ್ ,ಡೀಸೆಲ್ ಬೆಲೆ : ಇಂಧನ ದರ ಮತ್ತಷ್ಟು ಏರಿಕೆ

spot_img
- Advertisement -
- Advertisement -

ನವದೆಹಲಿ: ಒಂದು ದಿನದ ವಿರಾಮದ ನಂತರ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 25 ರಿಂದ 28 ಪೈಸೆಯಷ್ಟು ಹೆಚ್ಚಳ ಮಾಡಲಾಗಿದ್ದು, ದೇಶಾದ್ಯಂತ ಇಂಧನ ದರ ಇತಿಹಾಸ ನಿರ್ಮಿಸಿದೆ .

ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಮುಂಬೈನಲ್ಲಿ ಪೆಟ್ರೋಲ್ ದರ ಸಾರ್ವಕಾಲಿಕ ಗರಿಷ್ಠ, ದರ ದಾಖಲಿಸಿದ್ದು, ಒಂದು ಲೀಟರ್ ಪೆಟ್ರೋಲ್ ಬೆಲೆ 103.63 ರೂ.ಗೆ ತಲುಪಿದೆ. ಪೆಟ್ರೋಲ್ ಬೆಲೆ ಒಂದು ಲೀಟರ್ಗೆ 27 ಪೈಸೆಯಷ್ಟು ಹೆಚ್ಚಾಗಿದೆ. ಡೀಸೆಲ್ ದರ 28 ಪೈಸೆ ಹೆಚ್ಚಳವಾಗಿ ಪ್ರತಿ ಲೀಟರ್ ಗೆ 95.72 ರೂಪಾಯಿ ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 28 ಪೈಸೆ ಮತ್ತು 26 ಪೈಸೆ ಹೆಚ್ಚಾಗಿದೆ. ಬೆಲೆ ಏರಿಕೆಯ ನಂತರ ರಾಷ್ಟ್ರ ರಾಜಧಾನಿಯಲ್ಲಿ ಒಂದು ಲೀಟರ್ ಪೆಟ್ರೋಲ್ 97.50 ರೂ., ಡೀಸೆಲ್ 88.23 ರೂ.ಆಗಿದೆ.

ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ ತಲಾ 25 ಪೈಸೆ ಏರಿಕೆಯೊಂದಿಗೆ ಕ್ರಮವಾಗಿ 98.65 ರೂ. ಮತ್ತು 92.83 ರೂ.ಗೆ ತಲುಪಿದೆ.

ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಈ ಕಾರಣದಿಂದಾಗಿ, 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100 ರೂ.ಗಡಿ ದಾಟಿದೆ.

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜಸ್ಥಾನ ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿದ್ದು, ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿವೆ.

ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯು ಫೆಬ್ರವರಿ ಮಧ್ಯದಲ್ಲಿ ಪೆಟ್ರೋಲ್ ಲೀಟರ್ ದರ 100 ರೂ.ಗೆ ತಲುಪಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಗಂಗಾನಗರದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 108.37 ರೂ.ಗೆ ಮಾರಾಟ ಮಾಡಲಾಗುತ್ತದೆ. ಇದು ದೇಶದಲ್ಲಿಯೇ ಅತಿ ಹೆಚ್ಚು ದರವಾಗಿದೆ.

- Advertisement -
spot_img

Latest News

error: Content is protected !!