Sunday, May 5, 2024
Homeಉದ್ಯಮಸತತ 21ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ

ಸತತ 21ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ

spot_img
- Advertisement -
- Advertisement -

ನವದೆಹಲಿ: ಸತತ 21ನೇ ದಿನ ಇಂಧನ ದರ ಏರಿಕೆಯಾಗಿದೆ. ರಾಷ್ಟ್ರ ರಾಜಧಾನ ದೆಹಲಿಯಲ್ಲಿ ಪೆಟ್ರೋಲ್ ದರ 80.38 ಮತ್ತು ಡೀಸೆಲ್ ದರ 80.40ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 82.74 ರೂ ಇದೆ.

ದೇಶದಲ್ಲಿ ಲಾಕ್‌ಡೌನ್ ಜಾರಿಯಾಗುವ ಮೊದಲು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಕ್ರಮವಾಗಿ 69.60 ರೂ, 62.30 ರೂ.ಇತ್ತು. ಕೊವಿಡ್ 19 ಭೀತಿಯಿಂದಾಗಿ ಜಾರಿಯಲ್ಲಿದ್ದ ಲಾಕ್‌ಡೌನ್ ಸಡಿಲಗೊಂಡ ಬಳಿಕ ಜೂನ್ 7 ರಿಂದ ಇಂಧನ ದರ ಪರಿಷ್ಕರಣೆ ಆರಂಭಿಸಲಾಗಿದೆ.

ಅಂದಿನಿಂದ ತೈಲ ಬೆಲೆ ಏರುತ್ತಲೇ ಇದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 25 ಪೈಸೆ ಮತ್ತು 21 ಪೈಸೆಯಷ್ಟು ಹೆಚ್ಚಳವಾಗಿದೆ.

ವಿವಿಧ ರಾಜ್ಯಗಳಲ್ಲಿ ತೆರಿಗೆ ಮತ್ತು ಮೌಲ್ಯವರ್ಧಿತ ತೆರಿಗೆ ಆಧರಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. 80 ರೂ. ಗಡಿ ದಾಟಿದ ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, 100 ರೂ. ಸಮೀಪಕ್ಕೆ ಬಂದಿದೆ.

ಲಾಕ್‌ಡೌನ್‌ ನೀಡಿದ್ದ ಸಾರಿಗೆ ಇಲಾಖೆಯು ಸಾಕಷ್ಟು ನಷ್ಟವನ್ನು ಅನುಭವಿಸಿತ್ತು ಇದೀಗ ಡೀಸೆಲ್ ಬೆಲೆ ಏರಿಕೆಯಿಂದಾಗಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಇದರಿಂದಾಗಿ ಸರಕು ಸಾಗಾಣಿಕೆ ವೆಚ್ಚ ಹೆಚ್ಚಳವಾದರೆ ಆಹಾರ ಪದಾರ್ಥಗಳ ಬೆಲೆಯೂ ದುಬಾರಿಯಾಗಲಿದೆ.

- Advertisement -
spot_img

Latest News

error: Content is protected !!