Saturday, May 4, 2024
Homeತಾಜಾ ಸುದ್ದಿಪಾರ್ಟಿ ಮಾಡೋಣ ಎಂದು ಕರೆದು ಗೆಳೆಯನನ್ನೇ ಕೊಲೆಗೈದ ಯುವಕರು

ಪಾರ್ಟಿ ಮಾಡೋಣ ಎಂದು ಕರೆದು ಗೆಳೆಯನನ್ನೇ ಕೊಲೆಗೈದ ಯುವಕರು

spot_img
- Advertisement -
- Advertisement -

ಬೆಂಗಳೂರು: ಯುವಕನನ್ನು ಕಿಡ್ನ್ಯಾಪ್ ಮಾಡಿ ಕೊನೆಗೆ ಆತನ ಸ್ನೇಹಿತರೇ ಹತ್ಯೆಗೈದಿರುವ ಘಟನೆ ಹೆಸರಘಟ್ಟದ ಬಳಿ ನಡೆದಿದೆ. ಲಗ್ಗೆರೆ ನಿವಾಸಿ ಮಹೇಶ್‌ ಗೌಡ(20) ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. ಮಹೇಶ್​ನನ್ನು ಕೊಲೆಗೈದ ಕೃಷ್ಣ ಮತ್ತು ರವಿ ಪೊಲೀಸರಿಗೆ ಶರಣಾಗಿದ್ದಾರೆ.

ಮೂಲತಃ ಲಗ್ಗೆರೆ ನಿವಾಸಿಯಾಗಿದ್ದ ಮೃತ ಮಹೇಶ್ ಗೌಡ ಲಾಡ್ಜ್ ನಡೆಸುತ್ತಿದ್ದ. ಇದೇ ತಿಂಗಳ 21ರಂದು ಗೆಳೆಯರ ಜೊತೆ ಪಾರ್ಟಿ ಮಾಡೋಕೆ ಅಂತಾ ಹೊರಗಡೆ ಹೋಗಿದ್ದ. ನಂತರ ಮನೆಗೆ ವಾಪಾಸ್​ ಬರದೇ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಾಪತ್ತೆಯಾದ ಯುವಕನಿಗಾಗಿ ಹುಡುಕಾಟ ನಡೆಸೋಕೆ ಮುಂದಾದ ಪೊಲೀಸರಿಗೆ ಆಗ ಒಂದು ಶಾಕ್​ ಎದುರಾಯ್ತು. ಕಾಣೆಯಾದ ಯುವಕನ ಬಗ್ಗೆ ತಿಳಿಯಲು ಆತನ ಸ್ನೇಹಿತರಿಗೆ ಬುಲಾವ್​ ನೀಡಿದ್ದ ವೇಳೆ ನಿನ್ನೆ ಠಾಣೆಗೆ ಹಾಜರಾದ ಕೃಷ್ಣ ಹಾಗೂ ರವಿ ಸಾರ್​ ನಾಪತ್ತೆಯಾದ ಮಹೇಶ್​ನನ್ನು ನಾವೇ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿಬಿಟ್ಟೆವು ಎಂದು ತಪ್ಪೊಪ್ಪಿಕೊಂಡಿದ್ದಾರಂತೆ. ಜೊತೆಗೆ, ಮಹೇಶ್​ ಗೌಡನ ಶವವನ್ನು ಹೂತಿಟ್ಟಿರುವುದಾಗಿ ಸಹ ಹೇಳಿಕೆ ನೀಡಿದ್ದಾರಂತೆ.

ಮೂಲತಃ ಫೈನಾನ್ಶಿಯರ್ಸ್​​ ಆಗಿರುವ ಆರೋಪಿಗಳು ಮಹೇಶ್​ಗೆ ಮೊದಲಿನಿಂದಲೂ ಪರಿಚಯಸ್ಥರು. ಪಾರ್ಟಿ ಮಾಡುವ ನೆಪದಲ್ಲಿ ಹೆಸರಘಟ್ಟದಲ್ಲಿರುವ ತಮ್ಮ ಜಮೀನಿಗೆ ಮಹೇಶ್‌ ಗೌಡನನ್ನು ಕರೆದೊಯ್ದ ಆರೋಪಿಗಳು ಆತನನ್ನು ಕಿಡ್ನ್ಯಾಪ್ ಮಾಡೋಕೆ ಸ್ಕೆಚ್ ಹಾಕಿದ್ದರಂತೆ. ಇದನ್ನು ಅರಿತ ಮಹೇಶ್​ ಆರೋಪಿಗಳ ಜೊತೆ ಕಿತ್ತಾಟಕ್ಕೆ ಇಳಿದಿದ್ದಾನೆ. ಆಗ, ಕೃಷ್ಣ ಮತ್ತು ರವಿ ಮಹೇಶ್​ ಕೊಲೆ ಮಾಡಿ ಅಲ್ಲೇ ಹೂತು ಹಾಕಿದ್ದರಂತೆ. ಸದ್ಯ, ಆರೋಪಿಗಳನ್ನು ಬಂಧಿಸಿ ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

- Advertisement -
spot_img

Latest News

error: Content is protected !!