ಬೆಳ್ತಂಗಡಿ: ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಶ್ರೀ ಭೋಜರಾಜ ಹೆಗ್ಡೆಯವರು ತಮ್ಮ ಸ್ವಹೃದಲ್ಲೇ ಮಂಗಳವಾರದಂದು ದೈವಾಧೀನರಾದರು.

ತಮ್ಮ ಜೀವಿತಾವಧಿವರೆಗೂ ಅಪ್ಪಟ್ಟ ಗಾಂಧಿ ತತ್ವವನ್ನೇ ಪಾಲನೆ ಮಾಡಿದ್ದರು. ಸ್ವಾತಂತ್ರ್ಯ ಹೋರಾಟದ ಪ್ರತಿಭಟನೆಯಲ್ಲಿ ಪಾಲುಗೊಂಡು ನಂತರ ಕೇಸು ದಾಖಲಾಗಿ ಪ್ರತಿವಾರ ಸೋಮವಾರದಂದು ಬೆಳ್ತಂಗಡಿಯ ಪೊಲೀಸ್ ಠಾಣೆಯಲ್ಲಿ ಸಹಿ ಹಾಕುವಂತಾಗಿತ್ತು.
ಸ್ವಾತಂತ್ರದ ಚಳುವಳಿಯನ್ನ ಎಳೆಎಳೆಯಾಗಿ ಬಿಚ್ಚಿಡುವ ಸರಳ ಸಜ್ಜನಿಕೆಯ ,ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಯನ್ನ ಮನಸಾರೆ ಮೆಚ್ಚಿ ಆವರ ತತ್ವವನ್ನೇ ಇಂದಿಗೂ ಕಟ್ಟುನಿಟ್ಟಾಗಿ ಪಾಲನೆ ಪಾಲನೆ ಮಾಡಿದ್ದರು . ಮಂಗಳೂರಿನಲ್ಲಿ ಲಾಲ್ ಬಹಾದ್ದೂರ್ ಬಂದಾಗ ಅವರನ್ನೇ ಭೇಟಿ ಮಾಡಿ ಮನೆಪಾತ್ರಗಳನ್ನ ಬಟ್ಟೆಗಳನ್ನು ತೊಳೆಯುದನ್ನ ನೋಡಿ ,ಭೋಜ ರಾಜರು ಕೂಡ ತಮ್ಮ ಜೀವನದಲ್ಲಿ ಅದನ್ನೇ ಅಳವಡಿಸಿಕೊಂಡಿದ್ದರು. ಅಂದು ಸ್ವಾತಂತ್ರ್ಯ ಹೋರಾಟಗಾರರ ಸದಸ್ಯತ್ವವನ್ನ ಪಡೆದವರಲ್ಲಿ ಐದನೇ ಸದಸ್ಯ ಇವರಾಗಿದ್ದಾರೆ. ಇವರನ್ನ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿದ್ದವು.1923ರ ಮಾರ್ಚ್ 13ರಂದು ಪಠೇಲ್ ಶಾಂತಿಶೆಟ್ಟಿ ಮತ್ತು ಲಕ್ಷ್ಮೀಮತಿ ಅವರ ಪುತ್ರನಾಗಿ ಜನಿಸಿದರು.


