Saturday, May 18, 2024
Homeಕರಾವಳಿಮಾಣಿ: ಉಚಿತ ವೈದ್ಯಕೀಯ ನೇತ್ರ ಚಿಕಿತ್ಸೆ ಹಾಗೂ ದಂತ ತಪಾಸಣೆ ಚಿಕಿತ್ಸಾ ಶಿಬಿರ

ಮಾಣಿ: ಉಚಿತ ವೈದ್ಯಕೀಯ ನೇತ್ರ ಚಿಕಿತ್ಸೆ ಹಾಗೂ ದಂತ ತಪಾಸಣೆ ಚಿಕಿತ್ಸಾ ಶಿಬಿರ

spot_img
- Advertisement -
- Advertisement -

ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯ ಹಾಗೂ ಶ್ರೀ ಸತ್ಯಸಾಯಿ ಸೇವಾ ಸಮಿತಿ ಈಶ್ವರಾಂಬಾ ಟ್ರಸ್ಟ್ ಮಂಗಳೂರು, ಲಯನ್ಸ್ ಕ್ಲಬ್ ಮಾಣಿ, ಗ್ರಾಮ ಪಂಚಾಯತ್ ಮಾಣಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ, ಇದರ ಆಶ್ರಯದಲ್ಲಿ ಸಮುದಾಯ ದಂತ ವಿಭಾಗ ಯೇನಪೋಯ, ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೇನಪೋಯ ವಿಶ್ವವಿದ್ಯಾನಿಲಯ ದೇರಳಕಟ್ಟೆ ಇಲ್ಲಿಯ ವೈದ್ಯರ ತಂಡದ ಸಹಕಾರದೊಂದಿಗೆ ಉಚಿತ ವೈದ್ಯಕೀಯ ನೇತ್ರ ಚಿಕಿತ್ಸೆ ಹಾಗೂ ದಂತ ತಪಾಸಣೆ ಚಿಕಿತ್ಸಾ ಶಿಬಿರ ಜೂನ್.26 ರಂದು ಆದಿತ್ಯವಾರ ಸಮಯ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30ರ ತನಕ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಮಾಣಿಯಲ್ಲಿ ನಡೆಯಲಿದೆ.


ಸಾಮಾನ್ಯ ವೈದ್ಯಕೀಯ ವಿಭಾಗ, ಕಣ್ಣಿನ ಚಿಕಿತ್ಸಾ ವಿಭಾಗ, ಉಚಿತ ಕನ್ನಡಕ ವಿತರಣೆ. ದಂತ ಚಿಕಿತ್ಸಾ ವಿಭಾಗ ರಕ್ತ ವರ್ಗೀಕರಣ ವಿಭಾಗ, ಕಿವಿ, ಮೂಗು, ಗಂಟಲು ವಿಭಾಗ ಇವುಗಳು ಶಿಬಿರದಲ್ಲಿ ನೀಡಲಾಗುವ ಸೇವೆಗಳಾಗಿವೆ.


ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುವ ಲಯನ್ ಡಾ| ಶ್ರೀನಾಥ್ ಆಳ್ವ ಅಧ್ಯಕ್ಷರು, ಲಯನ್ಸ್ ಕ್ಲಬ್‌ ಮಾಣಿ ಹಾಗೂ ಸರ್ವಸದಸ್ಯರು, ಲಯನ್ ಬಾಲಕೃಷ್ಣ ಆಳ್ವ ಕೊಡಾಜೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು ಮಾಣಿ ಗ್ರಾಮ ಪಂಚಾಯತ್. ಡಾ| ಶಶಿಕಲಾ ಸಂಚಾಲಕರು ಮತ್ತು ಸದಸ್ಯರು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ಸತ್ಯಸಾಯಿ ಸೇವಾಸಮಿತಿ ಗಾಂಧಿನಗರ ಮಂಗಳೂರು, ಅಧ್ಯಕ್ಷರು ಮತ್ತು ಸದಸ್ಯರು, ಈಶ್ವರಾಂಬಾ ಟ್ರಸ್ಟ್ ಗಾಂಧಿನಗರ ಮಂಗಳೂರು, ಶ್ರೀಮತಿ ವಿನೋದ ಮೇಲ್ವಿಚಾರಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯ, ಲಯನ್ ಡಾ| ಎ ಮನೋಹರ್ ರೈ, ಅಂತರಗುತ್ತು.

- Advertisement -
spot_img

Latest News

error: Content is protected !!