Wednesday, October 21, 2026
Homeಕರಾವಳಿಮಂಗಳೂರಿನಲ್ಲಿ ಅ.24ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರಿನಲ್ಲಿ ಅ.24ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

- Advertisement -
- Advertisement -

ಮಂಗಳೂರು: ನೀರುಮಾರ್ಗದ ಜಿ.ಆರ್. ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಆಸ್ಪತ್ರೆ ಹಾಗೂ ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಅ.24ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಆಸ್ಪತ್ರೆಯ ಆವರಣದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರು ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲಿದ್ದಾರೆ.

ಶಿಬಿರದಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಡಾ. ದೇವಿದಾಸ್ ಶೆಟ್ಟಿ ಮತ್ತು ಡಾ. ಪ್ರಕಾಶ್, ಸಾಮಾನ್ಯ ವೈದ್ಯಕೀಯ ವಿಭಾಗದ ಡಾ. ದೇವದಾಸ್ ರೈ, ಡಾ. ಜೂಲಿಯನ್ ಸಲ್ಡಾನ ಮತ್ತು ಡಾ. ಈರಪ್ಪ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಡಾ. ಕಿಶೋರಿ, ಕಿವಿ, ಮೂಗು ಮತ್ತು ಗಂಟಲು ವಿಭಾಗದ ಡಾ. ಜೆಶ್ವಿನ್, ಮೂಳೆ ರೋಗ ವಿಭಾಗದ ಡಾ. ವಿಶಾಲ್ ಹಾಗೂ ನರಶಸ್ತ್ರಚಿಕಿತ್ಸಾ ವಿಭಾಗದ ಡಾ. ರವಿ ತೇಜ ಭಾಗವಹಿಸಲಿದ್ದಾರೆ. ಪ್ರಯೋಗಾಲಯದ ಉಸ್ತುವಾರಿಯನ್ನು ಪ್ರೊ. ಡಾ. ಸುಚೇತಾ ಶೆಟ್ಟಿ ವಹಿಸಲಿದ್ದಾರೆ.

ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕಿವಿ, ಮೂಗು ಮತ್ತು ಗಂಟಲು ಸಮಸ್ಯೆಗಳು, ಸ್ತ್ರೀರೋಗ, ಮೂಳೆ ಸಂಬಂಧಿತ ಸಮಸ್ಯೆಗಳು ಹಾಗೂ ನರರೋಗಗಳ ತಪಾಸಣೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!