Wednesday, June 3, 2026
Homeತಾಜಾ ಸುದ್ದಿಹೊಸ ಬಾಡಿಗೆದಾರರಿಗೆ ಮಾಸಿಕ 53 ಯುನಿಟ್ ಪರಿಗಣನೆ ಮತ್ತು 10% ಹೆಚ್ಚುವರಿ ವಿದ್ಯುತ್:ಇಂಧನ ಸಚಿವ ಕೆ.ಜೆ....

ಹೊಸ ಬಾಡಿಗೆದಾರರಿಗೆ ಮಾಸಿಕ 53 ಯುನಿಟ್ ಪರಿಗಣನೆ ಮತ್ತು 10% ಹೆಚ್ಚುವರಿ ವಿದ್ಯುತ್:ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ.

- Advertisement -
- Advertisement -

ಬೆಂಗಳೂರು: ಗೃಹ ಜ್ಯೋತಿ ಯೋಜನೆಯಡಿ ಹೊಸದಾಗಿ ಬಾಡಿಗೆ ಮನೆಗೆ ಬರುವವರಿಗೆ 12 ತಿಂಗಳ ಸರಾಸರಿ ಪರಿಗಣನೆ ಇಲ್ಲ ಮತ್ತು ಅವರಿಗೆ ದಾಖಲೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಾರ್ಜ್, ಹೊಸ ಮನೆ ಮತ್ತು ಮನೆ ಬದಲಾವಣೆ ವಿಚಾರ ಮುಖ್ಯಮಂತ್ರಿಗಳ ಜೊತೆ ಚರ್ಚೆಯಾಗಿದ್ದು, ಅವರಿಗೆ ಸರಾಸರಿ 53 ಯುನಿಟ್ ಮತ್ತು ಹೆಚ್ಚುವರಿಯಾಗಿ 10% ವಿದ್ಯುತ್ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಇದರಿಂದಾಗಿ 58 ಯುನಿಟ್ ವರೆಗೂ ವಿದ್ಯುತ್ ಉಚಿತ ಆಗಲಿದ್ದು, ಹೊಸ ಮನೆಯವರಿಗೆ ಕೂಡ ಇದೇ ಯುನಿಟ್ ಅನ್ವಯ ಆಗಲಿದ್ದು,
ಒಂದು ವರ್ಷದವರೆಗೂ ಸರಾಸರಿ ಲೆಕ್ಕ ಸಿಗದವರಿಗೆ ಇದು ಅನ್ವಯ ಆಗಲಿದೆ ಎಂದು ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಹೊಸ ಮನೆಯವರಿಗೆ ಹಂತ ಹಂತವಾಗಿ 200 ಯುನಿಟ್ ಉಚಿತ ವಿದ್ಯುತ್ ಸಿಗಲಿದೆ ಎಂದು ಇಂಧನ ಸಚಿವರು ತಿಳಿಸಿದ್ದಾರೆ.

- Advertisement -

Latest News

error: Content is protected !!