- Advertisement -
![]()
- Advertisement -
ಮಂಗಳೂರು : ಇಬ್ಬರು ಆರೋಪಿಗಳು ವಂಚನೆ ಮಾಡಿ ಫ್ಲ್ಯಾಟ್ ಮಾರಾಟ ಮಾಡಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2016ರಲ್ಲಿ ಪ್ರೆಸಿಲ್ಲಾ ಡಿಸೋಜ ಎಂಬವರು ಪ್ರಶಾಂತ್ ರಸ್ಕಿನಾ ಮತ್ತು ಜೋಯ್ಸಿ ರಸ್ಕಿನಾ ಎಂಬವರ ವಸತಿಗೃಹ ಕಟ್ಟಡದಲ್ಲಿ 250 ಚದರ ಅಡಿ ಮತ್ತು 710 ಚದರ ಅಡಿ ಫ್ಲಾಟ್ ಖರೀದಿಸಲು 32 ಲಕ್ಷ ರೂ.
ಹಣ ಪಾವತಿಸಿದ್ದರು. ಇದರಲ್ಲಿ 250 ಚದರ ಅಡಿ ಪ್ರೆಸಿಲ್ಲಾ ಅವರ ಹೆಸರಿಗೆ ನೋಂದಣಿಯಾಗಿದ್ದು, ಇನ್ನೊಂದು ಫ್ಲಾಟ್‌ನ್ನು ಆರೋಪಿಗಳಾದ ಪ್ರಶಾಂತ್ ಮತ್ತು ಜ್ಯೋಯ್ಸೋ ರಸ್ಕಿನಾ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಸಂಬಂಧವಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು
ಪೊಲೀಸರು ತನಿಖೆ ನಡೆಸುತ್ತಿದ್ದಾರೆ
- Advertisement -


