Thursday, June 25, 2026
Homeಅಪರಾಧಮಂಗಳೂರು: ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಗೆ ಧೋಖಾ; 49,998 ರೂ. ವಂಚನೆ

ಮಂಗಳೂರು: ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಗೆ ಧೋಖಾ; 49,998 ರೂ. ವಂಚನೆ

- Advertisement -
- Advertisement -

ಮಂಗಳೂರು: ಡಿಎಚ್‌ಎಲ್ ಕಸ್ಟಮರ್ ಕೇರ್‌ನಿಂದ ಕಾಲ್ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 49,998 ರೂ. ಡ್ರಾ ಮಾಡಿ ವಂಚಿಸಿದ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೋಸ ಹೋಗಿರುವ ವ್ಯಕ್ತಿಯು ನ.13ರಂದು ಬೆಳಗ್ಗೆ 10:17 ರ ಸುಮಾರಿಗೆ ಡಿಎಚ್ ಎಲ್ ಕಸ್ಟಮರ್ ಕೇರ್ ಗೆ ಕಾಲ್ ಮಾಡಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಯೋರ್ವರು ಕರೆಮಾಡಿ ಡಿಎಚ್‌ಎಲ್ ಕಸ್ಟಮರ್ ಕೇರ್ ನಿಂದ ಕಾಲ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಎನಿ ಡಿಸ್ಕ್ ಆಪನ್ನು ಡೌನ್ಲೋಡ್ ಮಾಡುವಂತೆ ಹೇಳಿದ್ದಾರೆ. ಬಳಿಕ ಮೊಬೈಲ್ ಗೆ ಲಿಂಕ್ ಒಂದನ್ನು ಕಳುಹಿಸುತ್ತಾರೆ. ಆತ ಕಳುಹಿಸಿದ ಲಿಂಕ್‌ಗೆ 5 ರೂ. ಪಾವತಿಸುವಂತೆ ತಿಳಿಸಿದ್ದಾರೆ. ಅದರಂತೆ ಲಿಂಕ್ ಓಪನ್ ಮಾಡಿ ತಮ್ಮ ಬ್ಯಾಂಕ್ ಖಾತೆ ನಂಬ್ರ ಹಾಗೂ ಒಟಿಪಿಯನ್ನು ಮೋಸ ಹೋದ ವ್ಯಕ್ತಿ ನಮೂದಿಸಿದ್ದು, ತಕ್ಷಣ ತಮ್ಮ ಬ್ಯಾಂಕ್ ಖಾತೆಯಿಂದ 49,998 ರೂಪಾಯಿ ಎರಡು ಬಾರಿ ಕಡಿತಗೊಂಡು ಇರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ

- Advertisement -

Latest News

error: Content is protected !!