Sunday, June 23, 2024
Homeಅಪರಾಧಹಣ ಹೂಡಿಕೆ ಮಾಡಿಸಿ ವಂಚನೆ; ಬ್ಯಾಂಕ್‌ ಮ್ಯಾನೇಜರ್ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು

ಹಣ ಹೂಡಿಕೆ ಮಾಡಿಸಿ ವಂಚನೆ; ಬ್ಯಾಂಕ್‌ ಮ್ಯಾನೇಜರ್ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಖಾಸಗಿ ಬ್ಯಾಂಕ್‌ವೊಂದರ ಮ್ಯಾನೇಜರ್ ಸಹಿತ ಮತ್ತೊಬ್ಬ ವ್ಯಕ್ತಿಯು ವ್ಯವಹಾರದಲ್ಲಿ 65 ಲಕ್ಷ ರೂ. ಹಣ ಹೂಡಿಕೆ ಮಾಡಿಸಿ, ವ್ಯಕ್ತಿಯೊಬ್ಬನಿಗೆ ವಂಚಿಸಿರುವ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಆರೋಪಿಗಳು ಬೈಕಂಪಾಡಿ ಕುಕ್ಕಾಡಿ ಕಾಂಪ್ಲೆಕ್ಸ್‌ನಲ್ಲಿ ಮಳಿಗೆ ಹೊಂದಿರುವ ಶರೀಫ್ ಮತ್ತು ಸುರತ್ಕಲ್ ಖಾಸಗಿ ಬ್ಯಾಂಕ್‌ ಶಾಖೆಯ ಮ್ಯಾನೇಜ‌ರ್ ರಾಘವೇಂದ್ರ ಶೇಟ್ ಎಂದು ತಿಳಿದು ಬಂದಿದೆ.

ಸುರತ್ಕಲ್ ಖಾಸಗಿ ಬ್ಯಾಂಕ್ ಶಾಖೆಯಲ್ಲಿ ತಾನು ತನ್ನ ಪತ್ನಿಯ ಜತೆ ಸೇರಿ ಖಾತೆ ತೆರೆದಿದ್ದೆ. ರಾಘವೇಂದ್ರ ಶೇಟ್ ಅದೇ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದು, ಆತ ಅವನ ಪರಿಚಿತ ಕುಕ್ಕಾಡಿಯ ಕಾಂಪ್ಲೆಕ್ಸ್‌ವೊಂದರ ಮಾಲಕ ಶರೀಫ್‌ನ ಪರಿಚಯ ಮಾಡಿಕೊಟ್ಟಿದ್ದರು. ಹಾಗೇ ಬ್ಯಾಂಕ್‌ನಲ್ಲಿ ಠೇವಣಿ ಇಡುವ ಬದಲು ಶರೀಫ್‌ ಜತೆ ಕೋಕ್ ಸರಬರಾಜು ವ್ಯವಹಾರದಲ್ಲಿ ಪಾಲುದಾರನಾಗಲು ಸೂಚಿಸಿದ್ದರು. ನಾನು ಕೂಡ ಇನ್ನೊಂದು ಬ್ಯಾಂಕ್ ಖಾತೆಯಿಂದ 2022ರ ಜೂ.6ರಂದು 50 ಲಕ್ಷ ರೂ.ವನ್ನು ಶರೀಫ್ ಖಾತೆಗೆ ವರ್ಗಾಯಿಸಿದ್ದೆ. ಹಣದ ಭದ್ರತೆಗಾಗಿ ಅಬ್ದುಲ್ ಬಶೀರ್ ಎಂಬಾತನ ಹೆಸರಿನಲ್ಲಿರುವ ಸ್ಥಿರಾಸ್ತಿಯನ್ನು ಸಾಲ ವ್ಯವಹಾರಕ್ಕಾಗಿ ಕರಾರು ಮಾಡಿಸಲಾಗಿತ್ತು. ಬಳಿಕ ಅ.17ರಂದು 15 ಲಕ್ಷ ರೂ.ವನ್ನು ಮತ್ತೆ ಶರೀಫ್‌ಗೆ ವರ್ಗಾವಣೆ ಮಾಡಿದ್ದೆ. ಅದಕ್ಕೂ ಚೆಕ್ ಲೀಫ್ ಪಡೆಯಲಾಗಿದೆ.

ಇನ್ನು ಇದರ ಬಳಿಕ ಕರಾರಿನಂತೆ ಶರೀಫ್ ಹಣ ಹಿಂತಿರುಗಿಸಲು ವಿಫಲನಾಗಿದ್ದು, ಆತ ಈ ಹಿಂದೆ ನೀಡಿದ ಚೆಕ್ಕನ್ನು ನಗದೀಕರಣಕ್ಕಾಗಿ ಬ್ಯಾಂಕಿಗೆ ಹಾಕಿದಾಗ ಚೆಕ್ ಬೌನ್ಸ್ ಆಗಿರುತ್ತದೆ. ರಾಘವೇಂದ್ರನಿಗೆ ಹಣದ ಹೂಡಿಕೆ ವಿಚಾರದಲ್ಲಿ ಶರೀಫ್ ಕಮಿಷನ್ ಹಣ ಕೊಟ್ಟಿರುವುದಾಗಿ ತಿಳಿಸಿದ್ದಾನೆ. ರಾಘವೇಂದ್ರ ಶೇಟ್‌ನ ಮಾತಿನಂತೆ ಶರೀಫ್‌ನ ವ್ಯವಹಾರಕ್ಕೆ ಹಣ ತೊಡಗಿಸಿ ಬಳಿಕ ವಾಪಸ್ ನೀಡದೆ ವಂಚಿಸಿರುವುದಾಗಿ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಪ್ರದೀಪ್ ಕುಮಾರ್ ಎಂಬವರ ಪತ್ನಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. 

- Advertisement -
spot_img

Latest News

error: Content is protected !!