- Advertisement -
![]()
- Advertisement -
ಮಂಗಳೂರಿನ ಪಬ್ ವೊಂದರಲ್ಲಿ ವಿಟ್ಲ ಮೂಲದ ಯುವತಿಗೆ ಕಿರುಕುಳ ನೀಡಿದ ಆರೋಪದಡಿ ಪುತ್ತೂರು ಮೂಲದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿ ಆ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.ಪುತ್ತೂರಿನ ಮಹೇಶ್ (28), ವಿನಯ್ (30), ನಿತೇಶ್ (32) ಮತ್ತು ಪ್ರೀತೇಶ್ (33) ಬಂಧಿತ ಆರೋಪಿಗಳು.
ವಿಟ್ಲ ಮೂಲದ ಯುವತಿ ಶನಿವಾರ ಗೆಳತಿ ಜತೆ ಪಬ್‌ಗ ಹೋಗಿದ್ದರು.ಇದೇ ಪಬ್‌ಗ ಪುತ್ತೂರಿನ ಯುವಕರ ತಂಡ ಬಂದಿತ್ತು. ಈ ವೇಳೆ ತಂಡದಲ್ಲಿದ್ದ ಯುವಕನೊಬ್ಬ ಯುವತಿಗೆ ಕಿರುಕುಳ ನೀಡಿದ್ದು, ಆಕೆ ವಿರೋಧಿಸಿದ್ದಾರೆ.
ಇದಾದ ಬಳಿಕವೂ ಯುವಕರು ಆಕೆಯ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಯುವತಿಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
- Advertisement -


