Sunday, June 7, 2026
Homeಕರಾವಳಿವಿಟ್ಲದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು 4 ವರ್ಷದ ಮಗು ಸಾವು

ವಿಟ್ಲದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು 4 ವರ್ಷದ ಮಗು ಸಾವು

- Advertisement -
- Advertisement -

ವಿಟ್ಲ : ತೋಟದಲ್ಲಿ ಇತರೆ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ತೋಟದ ಮಧ್ಯದಲ್ಲಿರುವ ಕೆರೆಗೆ ಬಿದ್ದು ನಾಲ್ಕು ವರ್ಷದ ಹೆಣ್ಣು ಮಗುವೊಂದು ಸಾವನ್ನಪ್ಪಿರುವ ಘಟನೆ ಸಮೀಪದ ಕೊಳ್ನಾಡು ಗ್ರಾಮದ ಸೆರ್ಕಳ ಎಂಬಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಹಂಝ ಎ ಅವರ ಪುತ್ರಿ ಸರಪುನ್ನಿಸಾ ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳ ಜೊತೆ ಈಕೆ ಅಬ್ಬಾಸ್‌ ಬಾಕಿಮಾರು ಎಂಬವರ ತೋಟಕ್ಕೆ ಆಟ ಆಡಲು ತೆರಳಿದ್ದಾಳೆ. ಈ ವೇಳೆ ಸರಪುನ್ನಿಸಾ ತೋಟದ ಮಧ್ಯದಲ್ಲಿದ್ದ ಕೆರೆಗೆ ಕಾಲು ಜಾರಿ ಬಿದ್ದಿದ್ದಾಳೆ. ಈ ವೇಳೆ ರಶೀದ್‌ ಹಾಗೂ ಬದ್ರುದ್ದೀನ್‌ ಅವರು ಓಡಿಕೊಂಡು ಬಂದು ಮನೆಯಲ್ಲಿ ವಿಷಯ ತಿಳಿಸಿದ್ದಾರೆ.

ಮನೆಮಂದಿ ತೋಟದ ಮಧ್ಯದಲ್ಲಿದ್ದ ಕೆರೆಯ ಬಳಿಗೆ ಹೋದಾಗ ಮಗು ನೀರಿನಲ್ಲಿ ಮುಳುಗಿರುವುದನ್ನು ಕಂಡು ಆಕೆಯನ್ನು ನೀರಿನಿಂದ ಹೊರಗೆ ತೆಗೆದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.  ವೈದ್ಯಾಧಿಕಾರಿಗಳು ಪರೀಕ್ಷಿಸಿ ಮಗು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!