Tuesday, April 23, 2024
Homeಕರಾವಳಿಉಡುಪಿಉಡುಪಿ ಜಿಲ್ಲೆಯಲ್ಲಿ ನಾಲ್ಕು ಕಡೆ ಪೊಲೀಸ್ ದಾಳಿ: ನಾಲ್ವರು ಪಿಎಫ್ ಐ ಮುಖಂಡರು ಪೊಲೀಸ್ ವಶಕ್ಕೆ

ಉಡುಪಿ ಜಿಲ್ಲೆಯಲ್ಲಿ ನಾಲ್ಕು ಕಡೆ ಪೊಲೀಸ್ ದಾಳಿ: ನಾಲ್ವರು ಪಿಎಫ್ ಐ ಮುಖಂಡರು ಪೊಲೀಸ್ ವಶಕ್ಕೆ

spot_img
- Advertisement -
- Advertisement -

ಉಡುಪಿ: ರಾಜ್ಯಾದ್ಯಂತ ನಡೆದಿರುವ ಪಿಎಫ್ ಐ ಮುಖಂಡರ ಮೇಲಿನ ದಾಳಿಯ ಭಾಗವಾಗಿ ಉಡುಪಿಯಲ್ಲೂ ಪಿಎಫ್ಐ ಮುಖಂಡರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಹೂಡೆ ಪಿಎಫ್ ಐ ಮುಖಂಡ ಇಲ್ಯಾಸ್ ಹೂಡೆಯನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದು, ಕುಂದಾಪುರದ ಆಶಿಕ್ ಕೋಟೇಶ್ವರನನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಂಗೊಳ್ಳಿಯಲ್ಲಿ ಪಿಎಫ್ಐ ಕಾರ್ಯಕರ್ತ ರಜಾಬ್, ಬೈಂದೂರಿನಲ್ಲಿ ಪಿಎಫ್ ಐ ಕಾರ್ಯಕರ್ತ ಕಲಿಲ್ ಸೈಯದ್‌ನನ್ನು ವಶಕ್ಕೆ ಪಡೆಯಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಕಡೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

- Advertisement -
spot_img

Latest News

error: Content is protected !!