Sunday, June 7, 2026
Homeಅಪರಾಧಬೈಕ್ ಡಿಕ್ಕಿ ; ಐಡಿಯಲ್ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ ಎಸ್.ಪ್ರಭಾಕರ ಕಾಮತ್ ಗೆ ಗಾಯ!

ಬೈಕ್ ಡಿಕ್ಕಿ ; ಐಡಿಯಲ್ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ ಎಸ್.ಪ್ರಭಾಕರ ಕಾಮತ್ ಗೆ ಗಾಯ!

- Advertisement -
- Advertisement -

ಮಂಗಳೂರು : ನಗರದ ಪ್ರಸಿದ್ಧ ಐಡಿಯಲ್ ಐಸ್‌ಕ್ರೀಂ ಸಂಸ್ಥೆಯ ಸ್ಥಾಪಕ ಎಸ್.ಪ್ರಭಾಕರ ಕಾಮತ್ (ಪಬ್ಬಾ ಮಾಮ್) (79) ರಸ್ತೆ ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ರಾತ್ರಿ 8:45ರ ವೇಳೆಗೆ ಬಿಜೈ ಬಳಿ ಕಾಪಿಕಾಡ್‌ನ 1ನೇ ಅಡ್ಡರಸ್ತೆಯಲ್ಲಿ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುವಾಗ ಲಾಲ್‌ಬಾಗ್ ಕಡೆಯಿಂದ ಬಂದ ದ್ವಿಚಕ್ರ ವಾಹನ ಹಿಂಬದಿಯಿಂದ ಢಿಕ್ಕಿಯಾಗಿದೆ. ಇದರ ಪರಿಣಾಮವಾಗಿ ಕಾಮತ್ ರಸ್ತೆಗೆ ಬಿದ್ದಿದ್ದು ಅವರ ಕೈಗಳಿಗೆ, ಎಡಕಣ್ಣಿನ ಹುಬ್ಬಿಗೆ, ಮೂಗಿಗೆ ಗಾಯವಾಗಿದೆ ಎನ್ನಲಾಗಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ಬಗ್ಗೆ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!