Thursday, June 25, 2026
Homeಕರಾವಳಿಮಾಜಿ ಶಾಸಕ, ಧಾರ್ಮಿಕ ಮುಖಂಡ ಶ್ರೀ ಅಪ್ಪಣ್ಣ ಹೆಗಡೆ ಇನ್ನಿಲ್ಲ

ಮಾಜಿ ಶಾಸಕ, ಧಾರ್ಮಿಕ ಮುಖಂಡ ಶ್ರೀ ಅಪ್ಪಣ್ಣ ಹೆಗಡೆ ಇನ್ನಿಲ್ಲ

- Advertisement -
- Advertisement -

ಕುಂದಾಪುರ: ಮಾಜಿ ಶಾಸಕ, ಧಾರ್ಮಿಕ ಮುಖಂಡ ಶ್ರೀ ಅಪ್ಪಣ್ಣ ಹೆಗಡೆ ಅವರು ವಯೋಸಹಜ ಅನಾರೋಗ್ಯದಿಂದ ತಮ್ಮ91 ವರ್ಷ ವಯಸ್ಸಿನಲ್ಲಿ ಶನಿವಾರದಂದು ಖಾಸಗಿ ಆಸ್ಪತ್ರೆಯಲ್ಲಿ (ಫೆ7)ನಿಧನರಾಗಿದ್ದಾರೆ.

1983 ರಿಂದ 1985 ರ ವರೆಗೆ ಅಪ್ಪಣ್ಣ ಹೆಗಡೆಯವರು ಬೈಂದೂರು ವಿಧಾನಸಭಾ ಕ್ಷೇತ್ರದ ಜನತಾ ಪಕ್ಷದ ಶಾಸಕರಾಗಿದ್ದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿಯಾಗಿದ್ದರು. ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇದೀಗ ಅಪ್ಪಣ್ಣ ಹೆಗ್ಡೆ ಅವರ ನಿಧನಕ್ಕೆ ಗಣ್ಯರು ಸೇರಿದಂತೆ ಅನೇಕರು ತೀವ್ರ ಸಂತಾಪ ಸೂಚಿಸಿದ್ದಾರೆ

- Advertisement -

Latest News

error: Content is protected !!