Friday, May 17, 2024
Homeತಾಜಾ ಸುದ್ದಿಮಾಜಿ ಅಂತಾರಾಷ್ಟ್ರೀಯ ಅಂಪೈರ್ ರೂಡಿ ಕೊರ್ಟ್ಜೆನ್ ಅಪಘಾತದಲ್ಲಿ ನಿಧನ

ಮಾಜಿ ಅಂತಾರಾಷ್ಟ್ರೀಯ ಅಂಪೈರ್ ರೂಡಿ ಕೊರ್ಟ್ಜೆನ್ ಅಪಘಾತದಲ್ಲಿ ನಿಧನ

spot_img
- Advertisement -
- Advertisement -

ಜೋಹಾನ್ಸ್ ಬರ್ಗ್ಮಾಜಿ ಅಂತಾರಾಷ್ಟ್ರೀಯ ಅಂಪೈರ್ ರೂಡಿ ಕೊರ್ಟ್ಜೆನ್ ನಿಧನರಾಗಿದ್ದಾರೆ. ಮಂಗಳವಾರ ಬೆಳಗ್ಗೆ ಭೀಕರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ನಂತರ 73 ವರ್ಷದ ರೂಡಿ ಕೊರ್ಟ್ಜೆನ್ ಮೃತಪಟ್ಟಿದ್ದು, ಕ್ರಿಕೆಟ್ ಸೌಥ್ ಆಫ್ರಿಕಾ ಕಂಬನಿ ಮಿಡಿದಿದೆ. 

1949 ಮಾರ್ಚ್ 26 ರಂದು ವೆಸ್ಟರ್ನ್ ಕೇಪ್ ಪ್ರಾಂತ್ಯದಲ್ಲಿ ಜನಿಸಿದ  ರೂಡಿ ಕೊರ್ಟ್ಜೆನ್ ಪೋರ್ಟ್ ಎಲಿಜಬೆತ್ ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಣ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂಲಕ 1992ರಲ್ಲಿ ಚೊಚ್ಚಲ ಬಾರಿಗೆ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದರು. 

ತಮ್ಮ 18 ವರ್ಷಗಳ ವೃತ್ತಿ ಜೀವನದಲ್ಲಿ 108 ಟೆಸ್ಟ್ ಪಂದ್ಯಗಳು, ದಾಖಲೆಯ 209 ಏಕದಿನ ಪಂದ್ಯಗಳು ಹಾಗೂ 14 ಟಿ-20 ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದು, ಐಸಿಸಿಯ ಎಮಿರೈಟ್ಸ್ ಎಲೈಟ್ ಸಮಿತಿ ಅಂಪೈರ್ ಸ್ಥಾನಮಾನ ಪಡೆದಿದ್ದರು.

2010 ಜೂನ್ 4 ರಂದು ಅಂಪೈರ್ ವೃತ್ತಿಯಿಂದ ನಿವೃತ್ತಿ ನಿರ್ಧಾರವನ್ನು ರೂಡಿ ಕೊರ್ಟ್ಜೆನ್ ಘೋಷಿಸಿದ್ದರು. ಇವರ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 

- Advertisement -
spot_img

Latest News

error: Content is protected !!