Sunday, May 19, 2024
Homeತಾಜಾ ಸುದ್ದಿ1.5 ಲಕ್ಷ ವೈದ್ಯರಿಗೆ 1,000 ಕೋಟಿಯ ಉಡುಗೊರೆ: ಡೋಲೋ ತಯಾರಕರ ವಿರುದ್ಧ ತನಿಖೆಗೆ ಸಮಿತಿ ರಚನೆ

1.5 ಲಕ್ಷ ವೈದ್ಯರಿಗೆ 1,000 ಕೋಟಿಯ ಉಡುಗೊರೆ: ಡೋಲೋ ತಯಾರಕರ ವಿರುದ್ಧ ತನಿಖೆಗೆ ಸಮಿತಿ ರಚನೆ

spot_img
- Advertisement -
- Advertisement -

ಹೊಸದಿಲ್ಲಿ: ಕೊರೊನಾ ಸಾಂಕ್ರಾಮಿಕದ ವೇಳೆ ಮನೆ ಮಾತಾಗಿದ್ದ ಡೋಲೊ 650 ಮಾತ್ರೆಯ ಉತ್ಪಾದಕ ಕಂಪನಿ, ಬೆಂಗಳೂರು ಮೂಲಕ ಮೈಕ್ರೋ ಲ್ಯಾಬ್ಸ್‌ ತನ್ನ ಉತ್ಪನ್ನಗಳ ಪ್ರಚಾರಕ್ಕೆ ಅನೈತಿಕ ಮಾರ್ಗಗಳನ್ನು ಅನುಸರಿಸಿದೆ ಎಂಬ ಆರೋಪಗಳ ಕುರಿತು ವಿಶೇಷ ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಔಷಧಗಳ ಇಲಾಖೆ ನಿರ್ಧರಿಸಿದೆ.

ಈ ಸಂಬಂಧ ಇಲಾಖೆಗಳು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಡಿಯಲ್ಲಿ ಬರುವ ನೈತಿಕ ಸಮಿತಿಗೆ ತನಿಖೆ ನಡೆಸುವಂತೆ ಸೂಚಿಸಿದ್ದು, ಜಂಟಿ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ರಚಿಸಲಾಗಿದೆ.

ಸಮಿತಿಗೆ, ಫಾರ್ಮಾ ಕಂಪನಿಗಳು ಮತ್ತು ವೈದ್ಯರ ಒಟ್ಟಾಗಿ ಮಾರುಕಟ್ಟೆಯನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದ್ದಾರೆ, ಅತಿಯಾದ ಮಾರಾಟವನ್ನು ಹೇಗೆ ನಡೆಸಿದ್ದಾರೆ ಎಂಬುದರ ಕುರಿತು ಆದಷ್ಟು ಬೇಗ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ಕಂಪನಿಯು ತನ್ನ ಉತ್ಪನ್ನಗಳ ಪ್ರಚಾರಕ್ಕೆಂದೇ ಸುಮಾರು 1.50 ಲಕ್ಷ ವೈದ್ಯರು ಹಾಗೂ ವೈದ್ಯಕೀಯ ಕ್ಷೇತ್ರದ ವೃತ್ತಿಪರರಿಗೆ 1000 ಕೋಟಿ ರೂ. ಉಚಿತ ಕೊಡುಗೆಗಳನ್ನು (ಚಿನ್ನಾಭರಣಗಳು, ವಿದೇಶ ಪ್ರವಾಸ, ಆಸ್ಪತ್ರೆಗಳಿಗೆ ಉಪಕರಣಗಳು ಇತ್ಯಾದಿ) ನೀಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಆರೋಪಿಸಿತ್ತು.

ತೆರಿಗೆ ವಂಚನೆ ಸಂಬಂಧ ದೇಶಾದ್ಯಂತ ಇರುವ ಕಂಪನಿಯ ಕಚೇರಿಗಳ ಮೇಲೆಯೂ ದಾಳಿಯೂ ನಡೆದಿತ್ತು. ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯ ಈ ಸಂಬಂಧ ದಾಳಿಗೆ ಗುರಿಯಾಗಿದ್ದ ವೈದ್ಯರು ಹಾಗೂ ಕಂಪನಿಯ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿ, ತನಿಖೆಯನ್ನು ತ್ವರಿತಗೊಳಿಸುವಂತೆ ಔಷಧಗಳ ಇಲಾಖೆಗೆ ಸೂಚಿಸಿದೆ. ಈ ಸಂಬಂಧ ವಿಶೇಷ ತನಿಖೆಗೆಂದು ಸಮಿತಿಯನ್ನೂ ರಚಿಸಿದೆ.

- Advertisement -
spot_img

Latest News

error: Content is protected !!