Wednesday, October 14, 2026
Homeತಾಜಾ ಸುದ್ದಿಗಂಡನ ಪ್ರೀತಿ ಉಳಿಸಲು ಡಿವೋರ್ಸ್ ನೀಡಿದ ಹೆಂಡ್ತಿ: ಪತಿಗೆ ಗಲ್ ಫ್ರೆಂಡ್ ಜೊತೆ ಮದುವೆ ಮಾಡಿಸಿದ...

ಗಂಡನ ಪ್ರೀತಿ ಉಳಿಸಲು ಡಿವೋರ್ಸ್ ನೀಡಿದ ಹೆಂಡ್ತಿ: ಪತಿಗೆ ಗಲ್ ಫ್ರೆಂಡ್ ಜೊತೆ ಮದುವೆ ಮಾಡಿಸಿದ ಪತ್ನಿ

- Advertisement -
- Advertisement -

ಮಧ್ಯಪ್ರದೇಶ: ತನ್ನ ಪತಿಗೆ ಬೇರೊಂದು ಹೆಣ್ಣಿನ ಸಹವಾಸ ಇದೆ ಅಂತಾ ಗೊತ್ತಾದ್ರೆ ಯಾವ ಪತ್ನಿ ಸಹಿಸಿಕೊಳ್ಳುತ್ತಾಳೆ ಹೇಳಿ. ಆದರೆ ಈ ಕಥೆ ಕೇಳಿದ್ರೆ ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತೆ. ತನ್ನ ಪತಿಗೆ ತಾನಿದ್ದರೆ ಆತನ ಗರ್ಲ್ ಫ್ರೆಂಡ್ ಜೊತೆ ಜೀವನ ಮಾಡೋದಕ್ಕೆ ಕಷ್ಟ ಆಗುತ್ತೆ ಅನ್ನೋ ಕಾರಣಕ್ಕೆ ಪತ್ನಿಯೊಬ್ಬಳು ತನ್ನ ಗಂಡನಿಗೆ ಡಿವೋರ್ಸ್ ನೀಡಿ ಗರ್ಲ್ ಫ್ರೆಂಡ್ ಜೊತೆ ಮದುವೆ ಮಾಡಿಸಿದ ಅಪರೂಪದ ಘಟನೆ ನಡೆದಿದೆ.

ಹೌದು… ವಿಚಿತ್ರ ಅನ್ನಿಸಿದ್ರೂ ಇದು ಸತ್ಯ. ಮಹಿಳೆಗೆ ವಿಚ್ಛೇದನ ಕೊಡಿಸಿದ ಲಾಯರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ನಿವಾಸಿಯಾದ ವ್ಯಕ್ತಿ ಮೂರು ವರ್ಷಗಳ ಹಿಂದೆ ಮಹಿಳೆಯೊಬ್ಬರನ್ನು ಮದುವೆಯಾಗಿದ್ರು. ಆದ್ರೆ ಈ ಮಧ್ಯೆ ತನ್ನ ಗರ್ಲ್​ಫ್ರೆಂಡ್​​​ ಜೊತೆಗೂ ಮದುವೆಯಾಗಿ ಇಬ್ಬರೊಂದಿಗೂ ಸಂಸಾರ ಮಾಡಬೇಕೆಂದಿದ್ದರು. ಆದ್ರೆ ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ವ್ಯಕ್ತಿಯ ಪತ್ನಿ ಬಹಳ ಪ್ರಬುದ್ಧರಾಗಿದ್ದರಿಂದ ತಾನೇ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಅಲ್ಲದೇ ತನ್ನ ಗಂಡ ಗರ್ಲ್​​​ಫ್ರೆಂಡ್​ ಜೊತೆಗೆ ಮದುವೆಯಾಗಲು ಬೆಂಬಲ ನೀಡಿದ್ದಾರೆ. ಈ ಮೂಲಕ ಈ ಕಾಲದಲ್ಲಿಯೂ ಇಂಥವರು ಇರ್ತಾರಾ ಅಂತಾ ಜನ ಯೋಚನೆ ಮಾಡುವಂತೆ ಮಾಡಿದ್ದಾರೆ.

- Advertisement -

Latest News

error: Content is protected !!