Tuesday, July 1, 2025
Homeಕರಾವಳಿಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ರಣಭೀಕರ ಮಳೆಯ ಹಿನ್ನೆಲೆ : ಸುಳ್ಯ ತಾಲೂಕಿನಲ್ಲಿ ಭಾರೀ ನಷ್ಟ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ರಣಭೀಕರ ಮಳೆಯ ಹಿನ್ನೆಲೆ : ಸುಳ್ಯ ತಾಲೂಕಿನಲ್ಲಿ ಭಾರೀ ನಷ್ಟ

spot_img
- Advertisement -
- Advertisement -

ಸುಳ್ಯ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ರಣಭೀಕರ ಮಳೆಯಿಂದಾಗಿ ಸುಳ್ಯ ತಾಲೂಕಿನ ಹಲವೆಡೆ ಭಾರೀ ನಷ್ಟ ಉಂಟಾಗಿದೆ. ಕಲ್ಮಕಾರು ಘಟ್ಟ ಪ್ರದೇಶದಿಂದ ನೀರಿನೊಂದಿಗೆ ಭಾರೀ ಗಾತ್ರದ ಮರಗಳು ಹರಿದು ಬಂದ  ಪರಿಣಾಮ ಹರಿಹರ ಪಲ್ಲತಡ್ಕ ಗ್ರಾಮ ಸಂಪೂರ್ಣ ಜಲಾವೃತಗೊಂಡಿತ್ತು.

ಹರಿಹರ – ಬಾಳಗೋಡು ಗ್ರಾಮ ಸಂಪರ್ಕಿಸುವ ಸೇತುವೆಯ ಮೇಲೆ ಭಾರಿ ಗಾತ್ರದ ಮರಗಳು ಬಂದು ಸೇರಿವೆ. ಇನ್ನು ಭಾರೀ ಗಾತ್ರದ ಮರಗಳ ಹೊಡೆತಕ್ಕೆ ಸೇತುವೆ ಬಿರುಕು ಬಿಟ್ಟವೆ. ಸೇತುವೆ ಮೇಲೆ ಬಂದು ಬಿದ್ದ ಭಾರಿ ಗಾತ್ರದ ಮರಗಳನ್ನು ಸ್ಥಳೀಯರು ತೆರವುಗೊಳಿಸಿದ್ದಾರೆ. ಇನ್ನು ನದಿ ಬದಿಯ 2 ಅಂಗಡಿಗಳು ಕೊಚ್ಚಿಹೋಗಿವೆ.

ಮಳೆಯ ಆರ್ಭಟ ಇನ್ನು ಸಂಪೂರ್ಣವಾಗಿ ಕಡಿಮೆಯಾಗದ ಕಾರಣ ಎನ್ ಡಿ ಆರ್ ಎಫ್ ತಂಡ ಹರಿಹರ ಪಲ್ಲತಡ್ಕ ಗ್ರಾಮದಲ್ಲಿ ಬೀಡು ಬಿಟ್ಟಿವೆ.

- Advertisement -
spot_img

Latest News

error: Content is protected !!