Sunday, May 12, 2024
Homeಉತ್ತರ ಕನ್ನಡಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಪಲ್ಟಿ: ಹತ್ತಕ್ಕೂ ಹೆಚ್ಚು ಮೀನುಗಾರರ ರಕ್ಷಣೆ

ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಪಲ್ಟಿ: ಹತ್ತಕ್ಕೂ ಹೆಚ್ಚು ಮೀನುಗಾರರ ರಕ್ಷಣೆ

spot_img
- Advertisement -
- Advertisement -

ಭಟ್ಕಳ: ಕರಾವಳಿಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಇದರಿಂದಾಗಿ ಸಮುದ್ರದಲ್ಲಿ ಮೀನುಗಾರರು ಕೂಡಾ ಅಪಾಯದಲ್ಲಿ ಸಿಲುಕುವಂತಾಗಿದೆ. ಅಲೆಗಳ ಹೊಡೆತದಿಂದಾಗಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಪಲ್ಟಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಭಟ್ಕಳದಿಂದ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಈ‌ ದುರ್ಘಟನೆ ಸಂಭವಿಸಿದ್ದು, ದೋಣಿಯಲ್ಲಿದ್ದ ಹತ್ತಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಪಾತಿ ದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ ಮೀನುಗಾರರು ಸಮುದ್ರದ ಅಲೆಯ ತೀವ್ರತೆಯಿಂದಾಗಿ ವಾಪಸ್ ಬರಲು ಸಾಧ್ಯವಾಗದೇ ಅಪಾಯಕ್ಕೆ ಸಿಲುಕಿದ್ದರು. ಈ ಸಂಧರ್ಭದಲ್ಲಿ ಕೆಲವು ಪಾತಿ ದೋಣಿಗಳು ಅಲೆಯ ರಭಸದಿಂದಾಗಿ ಪಲ್ಟಿಯಾಗಿವೆ ಎನ್ನಲಾಗಿದೆ. ಈ ವೇಳೆ ಅಪಾಯಕ್ಕೆ ಸಿಲುಕಿದ್ದ ಮೀನುಗಾರರನ್ನು ಗಿಲ್ನೆಟ್ ದೋಣಿ ಮೂಲಕ ರಕ್ಷಿಸಲಾಗಿದೆ‌.

- Advertisement -
spot_img

Latest News

error: Content is protected !!