Friday, May 17, 2024
Homeಕರಾವಳಿನೆಲ್ಯಾಡಿಯ ಉದನೆಯಲ್ಲಿ ದೇವರ ಮೀನಿನ ಮೇಲೆ ಕಿಡಿಗೇಡಿಗಳ ಕಣ್ಣು: ನೂರಾರು ಮೀನುಗಳ ಮಾರಣಹೋಮ

ನೆಲ್ಯಾಡಿಯ ಉದನೆಯಲ್ಲಿ ದೇವರ ಮೀನಿನ ಮೇಲೆ ಕಿಡಿಗೇಡಿಗಳ ಕಣ್ಣು: ನೂರಾರು ಮೀನುಗಳ ಮಾರಣಹೋಮ

spot_img
- Advertisement -
- Advertisement -

ನೆಲ್ಯಾಡಿ: ಕಡಬ ತಾಲೂಕಿನ ಉದನೆ ತೂಗುಸೇತುವೆ ಸಮೀಪ ಗುಂಡ್ಯ ಹೊಳೆಗೆ ಕಿಡಿಗೇಡಿಗಳು ತೋಟೆ ಹಾಕಿದ ಪರಿಣಾಮ ನೂರಾರು ದೇವರ ಮೀನುಗಳ ಮಾರಣ ಹೋಮ ನಡೆದದೆ. .
ಉದನೆ ತೂಗುಸೇತುವೆ ಸಮೀಪ ದೊಡ್ಡ ಕಯ ಇದ್ದು ಜನರು ಇಲ್ಲಿಗೆ ಹರಕೆ ರೂಪದಲ್ಲಿ ದನದ ಹಾಲು ತಂದು ಹಾಕುತ್ತಿದ್ದಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಆಚರಣೆ. ಇಲ್ಲಿನ ‘ಕಯ’ದ ಬಗ್ಗೆ ಜನರಲ್ಲೂ ಹಲವು ನಂಬಿಕೆಗಳೂ ಇವೆ. ಇಲ್ಲಿ ಪೆರುವೋಲು ಎಂದು ಕರೆಯಲ್ಪಡುವ ಮಹಿಶಿರ್ ಜಾತಿಯ ದೊಡ್ಡ ದೊಡ್ಡ ನೂರಾರು ಮೀನುಗಳು ಇವೆ. ಆದರೆ ಇದೇ ಮೀನಿನ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿದೆ. ಆದರೆ ಇದು ಹೊರಗಿನವರ ಕೆಲಸ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲೇ ಸಮೀಪ ಕಲ್ಲಿನ ಕೊರೆಯೊಂದಿದ್ದು ಅಲ್ಲಿ ಕೆಲಸ ಮಾಡುವವರೇ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ. ತೋಟೆ ಹಾಕಿದ ಪರಿಣಾಮ ಹೊಳೆ ಬದಿ ದಡದಲ್ಲಿ ಸತ್ತು ಬಿದ್ದಿದ್ದು ಇನ್ನು ಕೆಲವು ನದಿಯಲ್ಲಿ ತೇಲಾಡುತ್ತಿವೆ.

- Advertisement -
spot_img

Latest News

error: Content is protected !!