Tuesday, July 1, 2025
HomeUncategorizedಮಂಗಳೂರಿನ ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆ ಬಹುತೇಕ ಸ್ತಬ್ಧ

ಮಂಗಳೂರಿನ ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆ ಬಹುತೇಕ ಸ್ತಬ್ಧ

spot_img
- Advertisement -
- Advertisement -

ಮಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ವಿರೋಧಿಸಿ ಮುಸ್ಲಿಂ ಒಕ್ಕೂಟಗಳು ಗುರುವಾರ ಕರೆ ನೀಡಿರುವ ಬಂದ್ ಬೆಂಬಲಿಸಿ ನಗರದಲ್ಲಿ ಮುಸ್ಲಿಂ ಮಾಲೀಕತ್ವದ ಹಲವು ಅಂಗಡಿ, ಮಳಿಗೆಗಳು ಬಾಗಿಲು ಮುಚ್ಚಿವೆ.


ಸೆಂಟ್ರಲ್ ಮಾರ್ಕೆಟ್, ಸ್ಟೇಟ್ ಬ್ಯಾಂಕ್ ರೋಡ್, ದಕ್ಕೆಯಲ್ಲಿರುವ ಮುಸ್ಲಿಂ ಸಮುದಾಯದವರ ಹಲವು ಅಂಗಡಿಗಳು ವ್ಯವಹಾರ ಚಟುವಟಿಯನ್ನು ಸ್ಥಗಿತಗೊಳಿಸಿವೆ. ಕೆಲ ರಸ್ತೆ ಬದಿ ವ್ಯಾಪಾರಿಗಳು ಸಹ ಬಂದ್ ಕಾರಣಕ್ಕೆ ವ್ಯಾಪಾರ ನಡೆಸುತ್ತಿಲ್ಲ.


ಅಮೀರ್-ಇ-ಶರಿಯತ್ ಕರೆ ನೀಡಿರುವ ಬಂದ್ ಗೆ ಕರಾವಳಿಯ ಬಹುತೇಕ ಮುಸ್ಲಿಂ ಸಂಘಟನೆಗಳು ಬೆಂಬಲ ನೀಡಿವೆ.
ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆ ಬಹುತೇಕ ಸ್ತಬ್ಧಗೊಂಡಿದೆ. ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದು, ಎಲ್ಲೆಡೆ ಪೊಲೀಸರು ನಿಂತು ನಿಗಾವಹಿಸುತ್ತಿದ್ದಾರೆ.


ಜಿಲ್ಲೆಯ ಪುತ್ತೂರು, ಬಂಟ್ವಾಳ ತಾಲ್ಲೂಕು ಹಾಗೂ ಇನ್ನಿತರ ಗ್ರಾಮೀಣ ಪ್ರದೇಶಗಳಲ್ಲೂ ಮುಸ್ಲಿಂ ಸಮುದಾಯದವರ ಮಾಲೀಕತ್ವದ ಅಂಗಡಿ, ಹೋಟೆಲ್ ಗಳು ಬಂದ್ ಗೆ ಸ್ಪಂದಿಸಿ, ಬಾಗಿಲು ಮುಚ್ಚಿವೆ.

- Advertisement -
spot_img

Latest News

error: Content is protected !!