- Advertisement -
- Advertisement -
ಮಂಗಳೂರು: ಬೃಹತ್ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದ ಘಟನೆ ಮಂಗಳೂರಿನ ಬಂದರಿನಲ್ಲಿ ನಡೆದಿದೆ .

ಮಂಗಳೂರು ಮೀನುಗಾರಿಕಾ ಬಂದರಿನಿಂದ ಅರಬ್ಬೀ ಸಮುದ್ರದಲ್ಲಿ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಹೆಸರಿನ ಬೋಟ್ ನ ಮೀನುಗಾರರಿಗೆ ಈ ಮೀನು ದೊರಕಿದ್ದು, ಶಾರ್ಕ್ ಜಾತಿಗೆ ಸೇರಿದ ಮೀನು ಇದಾಗಿದ್ದುರಿಂದ ಈ ಮೀನುನ್ನು ಹಿಡಿಯುವುದು ಭಾರತದಲ್ಲಿ ನಿಷೇಧಿಸಲಾಗಿದೆ.

ಹೀಗಾಗಿ ಬಲೆಗೆ ಸಿಕ್ಕ ಮೀನನ್ನು ಮೀನುಗಾರರು ಬಲೆಯಿಂದ ಬಿಡಿಸಿ ಪುನಃ ಸಮುದ್ರಕ್ಕೆ ಬಿಟ್ಟಿದ್ದಾರೆ.ಸುಮಾರು 1,500 ಕ್ಕೂ ಹೆಚ್ಚು ತೂಕ ಈ ಮೀನು ಹೊಂದಿದ್ದು ಮೀನು ಸೆರೆ ಸಿಕ್ಕ ದೃಶ್ಯವನ್ನು ಬೋಟ್ ನಲ್ಲಿದ್ದ ಮೀನುಗಾರರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
- Advertisement -