Thursday, June 4, 2026
Homeತಾಜಾ ಸುದ್ದಿ65 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಂದು ತಿಂಗಳ ಮೊದಲನೇ ತಾರೀಕಿನಂದು ಕೆಎಸ್ ಆರ್ ಟಿಸಿ...

65 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಂದು ತಿಂಗಳ ಮೊದಲನೇ ತಾರೀಕಿನಂದು ಕೆಎಸ್ ಆರ್ ಟಿಸಿ ನೌಕರರಿಗೆ ವೇತನ ಪಾವತಿ

- Advertisement -
- Advertisement -

ಬೆಂಗಳೂರು: ಕಳೆದ‌ 65 ವರ್ಷಗಳ ಕೆಎಸ್ಆರ್ ಟಿ‌ಸಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಿಂಗಳ ಒಂದನೇ ತಾರೀಕಿನಂದು ವೇತನ ಪಾವತಿ ಮಾಡಲಾಗಿದೆ.

ಕೆಎಸ್ ಆರ್ ಟಿಸಿ ಚಾಲಕ, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ನಿಗಮದ ಎಲ್ಲಾ 36,000 ಸಿಬ್ಬಂದಿಗಳಿಗೆ ತಿಂಗಳ ಇಂದು ವೇತನ‌ ಪಾವತಿ ಮಾಡಲಾಗಿದೆ.

ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಆದೇಶದಂತೆ ಇಂದು ಮೊದಲ ಬಾರಿಗೆ ವೇತನ ಪಾವತಿ ಮಾಡಲ್ಪಟ್ಟಿದೆ.

ಈ ಮೂಲಕ ದಸರಾ ಹಬ್ಬದ ಕೊಡುಗೆಯನ್ನು ಕೆಎಸ್ ಆರ್ ಟಿಸಿ ನೌಕರರಿಗೆ ಸಾರಿಗೆ ಸಂಸ್ಥೆ ನೀಡಿದಂತಾಗಿದೆ.

- Advertisement -

Latest News

error: Content is protected !!