Saturday, May 4, 2024
Homeಕರಾವಳಿಫಸ್ಟ್‌ ನ್ಯೂರೋ ಆಸ್ಪತ್ರೆಯ 39 ಸಿಬ್ಬಂದಿಗಳ ಕೊರೋನಾ ವರದಿ ನೆಗೆಟಿವ್

ಫಸ್ಟ್‌ ನ್ಯೂರೋ ಆಸ್ಪತ್ರೆಯ 39 ಸಿಬ್ಬಂದಿಗಳ ಕೊರೋನಾ ವರದಿ ನೆಗೆಟಿವ್

spot_img
- Advertisement -
- Advertisement -

ಮಂಗಳೂರು, ಮೇ 12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಜನತೆಯನ್ನು ನಡುಗಿಸಿ ಬಿಟ್ಟಿದ್ದ ಮಂಗಳೂರಿನ ಪಡೀಲ್ ಕಣ್ಣೂರು ಬಳಿ ಇರುವ ಫಸ್ಟ್ ನ್ಯೂರೋ ಆಸ್ಪತ್ರೆಯ ನಂಟು ಕೊರೊನಾ ಪಾಸಿಟಿವ್ ಬರಲು ಕಾರಣವಾಗಿದ್ದರೆ, ಇದೀಗ ಇದೇ ಫಸ್ಟ್ ನ್ಯೋರೋ ಆಸ್ಪತ್ರೆಯಲ್ಲಿನ 39 ಸಿಬ್ಬಂದಿಗಳ ಕೊರೊನಾ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ.

ಮಂಗಳೂರು ಸೇರಿದಂತೆ ಉಡುಪಿ, ಮಡಿಕೇರಿ, ಕಾಸರಗೋಡು, ಉತ್ತರ ಕನ್ನಡ ಮೊದಲಾದ ಜಿಲ್ಲೆಗಳಲ್ಲಿ ಆತಂಕಕ್ಕೆ ಕಾರಣವಾಗಿರುವ ಫಸ್ಟ್‌ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಗೆ ಕೊರೊನಾ ದೃಢಪಟ್ಟ ಬಳಿಕ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು ಅಲ್ಲಿ ಚಿಕಿತ್ಸೆ ಪಡೆದವರ ಹಾಗೂ ಕೊರೊನಾ ಸೋಂಕಿತೆಯ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಫಸ್ಟ್‌ ನ್ಯೂರೋ ಆಸ್ಪತ್ರೆಯ ಸಿಬ್ಬಂದಿಗಳನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದ್ದು ಸೋಮವಾರ 39 ಸಿಬ್ಬಂದಿಗಳ ಕೊರೊನಾ ವರದಿ ನೆಗೆಟಿವ್‌ ಬಂದಿದೆ. ಅವರೆಲ್ಲರೂ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹಿಂತಿರುಗಿದ್ದಾರೆ.

ಬಂಟ್ವಾಳ, ಫಸ್ಟ್ ನ್ಯೂರೋ ಹಾಗೂ ಬೋಳೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 1000ಕ್ಕೂ ಅಧಿಕ ಮಂದಿಯ ಗಂಟಲ ದ್ರವ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 17 ಮಂದಿಗೆ ಕೊರೊನಾ ಪಾಸಿಟಿವ್‌ ಆಗಿದೆ.

ಮೆದುಳು ಮತ್ತು ನರದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಾಗಿರುವ ಫಸ್ಟ್‌ ನ್ಯೂರೋ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲೊಂದು. ಡಾ. ರಾಜೇಶ್‌ ಶೆಟ್ಟಿ ನೇತೃತ್ವದ ಇಲ್ಲಿರುವ ವೈದ್ಯಕೀಯ ತಜ್ಞರ ತಂಡಕ್ಕೆ ಎಷ್ಟೋ ಕ್ಲಿಷ್ಟ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಖ್ಯಾತಿ ಇದೆ. ಕರ್ನಾಟಕ ಮಾತ್ರವಲ್ಲದೇ, ಕೇರಳದಿಂದಲೂ ಇಲ್ಲಿಹೆಚ್ಚಿನ ಸಂಖ್ಯೆಯಲ್ಲಿನರ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ ದುರದೃಷ್ಟವಶಾತ್‌ ಇದೀಗ ಈ ಆಸ್ಪತ್ರೆ ತನ್ನದಲ್ಲದ ತಪ್ಪಿಗೆ ಕರಾವಳಿಯ ಕೊರೊನಾ ಪ್ರಕರಣಗಳ ಕೇಂದ್ರ ಬಿಂದುವಾಗಿ ಪರಿಣಮಿಸಿದೆ. 

- Advertisement -
spot_img

Latest News

error: Content is protected !!