Monday, June 30, 2025
Homeಕರಾವಳಿಮಂಗಳೂರಿನಲ್ಲಿ ಕೋವಿಡ್ ಹೊಸ ತಳಿ ಇಟಾ ವೈರಸ್ ಪತ್ತೆ; ಕತಾರ್ ನಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು!

ಮಂಗಳೂರಿನಲ್ಲಿ ಕೋವಿಡ್ ಹೊಸ ತಳಿ ಇಟಾ ವೈರಸ್ ಪತ್ತೆ; ಕತಾರ್ ನಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು!

spot_img
- Advertisement -
- Advertisement -

ಮಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಭೀತಿಯ ನಡುವೆ ಮತ್ತೊಂದು ರೂಪದಲ್ಲಿ ಡೆಡ್ಲಿ ವೈರಸ್ ಎಂಟ್ರಿ ಕೊಟ್ಟಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಟಾ ಹೆಸರಿನ ಹೊಸ ತಳಿಯ ವೈರಾಣು ಪತ್ತೆಯಾಗಿದೆ. ಕೋವಿಡ್ ಪಾಸಿಟಿವ್ ಬಂದಿದ್ದ ವ್ಯಕ್ತಿಯ ಸ್ವ್ಯಾಬ್‌ ಅನ್ನು ಜಿನೋಮಿಕ್ ಸಿಕ್ವೆನ್ಸ್ ಪರೀಕ್ಷೆಗೆ ಒಳಪಡಿಸಿದಾಗ ‘ಇಟಾ’ ತಳಿಯ ವೈರಸ್‌ ಎಂದು ಖಚಿತವಾಗಿದೆ.

ಎರಡು ತಿಂಗಳ ಹಿಂದೆ ಕತಾರ್ ನಿಂದ ಬಂದಿದ್ದ ವ್ಯಕ್ತಿಯೊಬ್ಬರ ಕೋವಿಡ್ ತಪಾಸಣೆ ನಡೆಸಿದಾಗ ಪಾಸಿಟಿವ್ ಪತ್ತೆಯಾಗಿತ್ತು. ಆದ್ರೆ ಯಾವುದೇ ರೋಗ ಲಕ್ಷಣಗಳು ಇಲ್ಲದೆಯೇ ಪಾಸಿಟಿವ್ ಬಂದಿತ್ತು.ಈ ಕಾರಣಕ್ಕಾಗಿ ಅವರ ಗಂಟಲು ದ್ರವದ ಮಾದರಿಯನ್ನು ಹೆಚ್ಚಿನ ಪರಿಶೀಲನೆಗಾಗಿ ಬೆಂಗಳೂರಿನ ವೈರಾಲಜಿ ವಿಭಾಗಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಆ ವ್ಯಕ್ತಿಯಲ್ಲಿ ಕೊವೀಡ್ ವಂಶಾವಳಿಯು B.1.525, ‘ಇಟಾ’ ತಳಿಯ ವೈರಾಣು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.

ವ್ಯಕ್ತಿಗೆ ಪಾಸಿಟಿವ್ ಬಂದಾಗಲೇ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 152 ಪ್ರಾಥಮಿಕ ಸಂಪರ್ಕಿತರನ್ನು ಟೆಸ್ಟ್‌ಗೆ ಒಳಪಡಿಸಲಾಗಿತ್ತು. ಆದ್ರೆ ಯಾರಿಗೂ ಪಾಸಿಟಿವ್ ಬಂದಿರಲಿಲ್ಲ. ಪಾಸಿಟಿವ್ ಬಂದಿದ್ದ ವ್ಯಕ್ತಿಯ ಆರೋಗ್ಯದಲ್ಲೂ ಏರುಪೇರು ಆಗಿರಲಿಲ್ಲ. ಹೀಗಾಗಿ ಈ ರೂಪಾಂತರಿ ತಳಿಯ ಬಗ್ಗೆ ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯಾಧಿಕಾರಿ ಹೇಳಿದ್ದಾರೆ. ಇಟಾ ವೈರಸ್ ಇದ್ದ ವ್ಯಕ್ತಿ ಸದ್ಯ ಆರೋಗ್ಯವಾಗಿದ್ದು ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ.

- Advertisement -
spot_img

Latest News

error: Content is protected !!