Sunday, June 7, 2026
Homeಕರಾವಳಿಮಂಗಳೂರು:ಅಕ್ರಮವಾಗಿ ದಾಸ್ತಾನಿರಿಸಿದ್ದ ರೂ 4.31 ಲಕ್ಷ ಮೌಲ್ಯದ ಪಟಾಕಿ ವಶ;ಓರ್ವನ ಬಂಧನ!

ಮಂಗಳೂರು:ಅಕ್ರಮವಾಗಿ ದಾಸ್ತಾನಿರಿಸಿದ್ದ ರೂ 4.31 ಲಕ್ಷ ಮೌಲ್ಯದ ಪಟಾಕಿ ವಶ;ಓರ್ವನ ಬಂಧನ!

- Advertisement -
- Advertisement -

ಮಂಗಳೂರು: ಪರವಾನಿಗೆ ಇಲ್ಲದೆ ಪಟಾಕಿಯನ್ನು ದಾಸ್ತಾನು ಇರಿಸಿಕೊಂಡಿದ್ದ ಮಳಿಗೆಗೆ ಕಂಕನಾಡಿ ನಗರ ಠಾಣಾ ಪೊಲೀಸರು ದಾಳಿ ನಡೆಸಿ ಸುಮಾರು ರೂ 4.31 ಲಕ್ಷ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.

ಪದವು ಕುಲಶೇಖರ ಚೌಕಿ ಎಂಬಲ್ಲಿರುವ ಕಾಂಚನಾ ಗಂಗಾ ಟ್ರೇಡರ್ಸ್ ಎಂಬ ಗೋದಾಮಿನ ಕೊಠಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸ್ಪೋಟಕ ವಸ್ತುವಾದ ಪಟಾಕಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪೋಲಿಸರಿಗೆ ಮಾಹಿತಿ ಲಭಿಸಿದ್ದು, ಸ್ಥಳಕ್ಕೆ ಕಂಕನಾಡಿ ನಗರ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಜೊತೆ ದಾಳಿ ನಡೆಸಿದ್ದರು.

ಸ್ಪೋಟಕ ವಸ್ತುವಾದ ಪಟಾಕಿಯನ್ನು ಮಾರಾಟ ಮಾಡಿ ಹಣಗಳಿಸುವ ಉದ್ದೇಶದಿಂದ ಅಕ್ರಮವಾಗಿ ದಾಸ್ತಾನು ಇರಿಸಲಾಗಿತ್ತು ಎಂದು ಹೇಳಲಾಗಿದೆ.ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿಕೊಂಡಿದ್ದ ವಿವಿಧ ಹೆಸರಿನ ಸುಮಾರು 4,31,630/- ರೂಪಾಯಿ ಮೌಲ್ಯದ ಸ್ಫೋಟಕ ವಸ್ತುವಾದ ವಿವಿಧ ಬಗೆಯ ಪಟಾಕಿಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!