Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಬೆಂಕಿಗಾಹುತಿಯಾದ ಮನೆ, ಲಕ್ಷಾಂತರ ರೂಪಾಯಿ ನಷ್ಟ

ಮಂಗಳೂರು; ಬೆಂಕಿಗಾಹುತಿಯಾದ ಮನೆ, ಲಕ್ಷಾಂತರ ರೂಪಾಯಿ ನಷ್ಟ

- Advertisement -
- Advertisement -

ಮಂಗಳೂರು; ಮನೆಯೊಂದು ಬೆಂಕಿಗಾಹುತಿಯಾಗಿ  ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಪಡುಪೆರಾರ ಗ್ರಾಪಂ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಕೆಳಸಿಬೆಟ್ಟು ಎಂಬಲ್ಲಿ ನಡೆದಿದೆ. ಇಲ್ಲಿನ  ನಿವಾಸಿ ಪೂವಪ್ಪಗೌಡ ಎಂಬವರ ಮನೆಯಲ್ಲಿ  ಶುಕ್ರವಾರ ಬೆಂಕಿ ಅನಾಹುತ ಸಂಭವಿಸಿದೆ.

ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಘಟನೆಯಿಂದ ಅಂದಾಜು 2 ಲಕ್ಷ ರೂ.ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪೂವಪ್ಪ ಹಾಗೂ ಅವರ ಪತ್ನಿ ಕೆಲಸಕ್ಕೆ ಹೊರಗಡೆ ಹೋಗಿದ್ದ ವೇಳೆ ಅಂದರೆ ಬೆಳಗ್ಗೆ 10ರ ವೇಳೆ ಮನೆಯಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಮನೆಯ ಮರದ ಪಕ್ಕಾಸು, ಹೆಂಚು,

ಪೀಠೋಪಕರಣ, ಬಟ್ಟೆಬರೆ ಮತ್ತಿತರ ಸೊತ್ತುಗಳು ಸುಟ್ಟು ಕರಕಲಾಗಿವೆ. ತಕ್ಷಣದ ಪರಿಹಾರವಾಗಿ ಗಾಪಂ ವತಿಯಿಂದ ಪೂವಪ್ಪಗೌಡರಿಗೆ 5,000 ರೂ.ನೆರವು ನೀಡಲಾಗಿದೆ

- Advertisement -

Latest News

error: Content is protected !!