Wednesday, June 3, 2026
Homeಕರಾವಳಿಚಾರ್ಮಾಡಿಯಲ್ಲಿ ಬೆಂಕಿ ಅನಾಹುತ : ಲಕ್ಷಾಂತರ ರೂಪಾಯಿ ಮೌಲ್ಯದ ತೆಂಗು , ರಬ್ಬರ್ ಬೆಂಕಿಗಾಹುತಿ

ಚಾರ್ಮಾಡಿಯಲ್ಲಿ ಬೆಂಕಿ ಅನಾಹುತ : ಲಕ್ಷಾಂತರ ರೂಪಾಯಿ ಮೌಲ್ಯದ ತೆಂಗು , ರಬ್ಬರ್ ಬೆಂಕಿಗಾಹುತಿ

- Advertisement -
- Advertisement -

ಬೆಳ್ತಂಗಡಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಕೊಟ್ಟಿಗೆಯಲ್ಲಿದ್ದ ತೆಂಗಿನಕಾಯಿ, ಬೈಹುಲ್ಲು, ರಬ್ಬರ್ ಶೀಟ್ ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗರಿ ಸಂಜೀವ ಗೌಡ ಎಂಬವರ ಮನೆಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಮನೆಯವರು ಮಲಗಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಉರಿಯುವ ಸದ್ದು ಕೇಳಿ ಹೊರಗೆ ಓಡಿಬಂದು ನೋಡಿದಾಗ ಕೊಟ್ಟಿಗೆಯನ್ನು ಬೆಂಕಿ ಆವರಿಸಿಕೊಂಡಿತ್ತು. ಅಲ್ಲಿ ದಾಸ್ತಾನಿರಿಸಿದ್ದ 3 ಸಾವಿರ ಒಣ ತೆಂಗಿನಕಾಯಿಗಳು, ಮಾರಾಟಕ್ಕೆಂದು ಸಿದ್ಧಪಡಿಸಿದ ರಬ್ಬರ್ ಶೀಟ್, ಹಾಗೂ ಬೈಹುಲ್ಲಿಗೆ ಬೆಂಕಿ ತಗಲಿ ಸುಟ್ಟು ಭಸ್ಮವಾಗಿದೆ ಎಂದು ತಿಳಿದುಬಂದಿದೆ.

ಇದರಿಂದ ಸುಮಾರು 5 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.ಬೆಳ್ತಂಗಡಿ ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ.

- Advertisement -

Latest News

error: Content is protected !!