ಶಿರ್ವ: ಇಲ್ಲಿನ ಹಿಂದೂ ಪ.ಪೂ. ಕಾಲೇಜಿನ ಬಳಿಯ ಪ್ರದೇಶಕ್ಕೆ ಬೆಂಕಿ ತಗಲಿ ಮರಗಿಡಗಳು ಹೊತ್ತಿ ಉರಿದು ಅಪಾರ ಹಾನಿ ಸಂಭವಿಸಿದ ಘಟನೆ ಮಾ. 12ರಂದು ನಡೆದಿದೆ.
ಕಾಡಿಕಂಬಳ ನಜರೆತ್‌ನಗರ -ಹಿಂದೂ ರುದ್ರಭೂಮಿ ಶಿರ್ವ ಹಿಂದೂ ಪ.ಪೂ. ಕಾಲೇಜಿನ ಬಳಿಯ ಪ್ರದೇಶಕ್ಕೆ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಹಾರಿದ ಕಿಡಿಯಿಂದ ಬೆಂಕಿ ತಗುಲಿ, ಸುಮಾರು 2-3 ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿ ಅಪಾರ ಹಾನಿ ಸಂಭವಿಸಿದೆ. ಇನ್ನು ಬೆಂಕಿ ಅವಘಡದ ಪರಿಣಾಮವಾಗಿ ಪಕ್ಕದಲ್ಲಿದ್ದ ಮನೆಗಳಿಗೆ ಬೆಂಕಿ ಹರಡದಂತೆ ಸ್ಥಳೀಯರೆಲ್ಲ ಸೇರಿ ಪ್ರಯತ್ನಿಸಿದ್ದಾರೆ.
ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳದ ತಂಡ ಆಗಮಿಸಿದ್ದು, ಫೈರ್‌ಮ್ಯಾನ್‌ಗಳಾದ ರಾಘವೇಂದ್ರ, ಅಮರ್ ಕಟ್ಟಿ, ಅರುಣ್, ವಿನಾಯಕ ಕಲ್ಮನೆ, ಚಾಲಕ ಆಲ್ವಿನ್, ಶಿರ್ವ ಎಂಎಸ್‌ಆರ್‌ಎಸ್ ಕಾಲೇಜಿನ ಪ್ರಾಂಶುಪಾಲ ಡಾ| ಮಿಥುನ್ ಚಕ್ರವರ್ತಿ, ಸ್ಥಳೀಯರಾದ ಜಯಪಾಲ ಶೆಟ್ಟಿ, ಅಶೋಕ್, ಡಾ| ರವಿಶಂಕರ್, ಕಾಲೇಜಿನ ವಾಚ್‌ಮೆನ್ ಮತ್ತಿತರು ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದರು.