Saturday, May 18, 2024
Homeಕರಾವಳಿಮೂಡುಬಿದಿರೆ ವಾಲ್ಪಾಡಿಯಲ್ಲಿ ಪಂಚಾಯತ್ ಕಟ್ಟಡಕ್ಕೆ ಬೆಂಕಿ

ಮೂಡುಬಿದಿರೆ ವಾಲ್ಪಾಡಿಯಲ್ಲಿ ಪಂಚಾಯತ್ ಕಟ್ಟಡಕ್ಕೆ ಬೆಂಕಿ

spot_img
- Advertisement -
- Advertisement -

ಮೂಡುಬಿದಿರೆ :  ಮೂಡುಬಿದಿರೆ ತಾಲೂಕಿನ ವಾಲ್ಪಾಡಿಯಲ್ಲಿ ಪಂಚಾಯತ್ ಕಟ್ಟಡಕ್ಕೆ ಬೆಂಕಿ ಬಿದ್ದು ಅಪಾರ ಹಾನಿ ಉಂಟಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅವಘಡ ಸಂಭವಿಸಿದೆ ಅಂತಾ ಹೇಳಲಾಗಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಆಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಸಂಜೆ 5.45ರ ವೇಳೆಗೆ ಈ ಘಟನೆ ನಡೆದಿದ್ದು ಯಾವುದೇ ಸಾವು ನೋವು ಸಂಭವಿಸಿಲ್ಲ.  ಅಲ್ಲದೆ ಕಚೇರಿಯ ಒಳಗಿದ್ದ ಕಾಗದ ಪತ್ರಗಳು ಸುರಕ್ಷಿತವಾಗಿವೆ ಎನ್ನಲಾಗಿದೆ.

ಬೆಂಕಿ ಅನಾಹುತದಿಂದ ಅಂದಾಜು 2 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಪಂಚಾಯತ್ ಪಿಡಿಓ ಶೇಖರ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!