ಉಪ್ಪಿನಂಗಡಿ; ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೆಕ್ಕಾರು ನಿವಾಸಿ ಇಬ್ರಾಹಿಂ ಎಂಬವರು ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?;
ದಿನಾಂಕ 03-05-2025 ಬೆಳ್ತಂಗಡಿ ತಾಲೂಕಿನ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮ ನಡೆಯುತ್ತಿದ್ದು ನಾನು ಅಲ್ಲಿಗೆ ಹೋಗಿದ್ದಾಗ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿದ್ದವರ ಪೈಕಿ ಬೆಳ್ತಂಗಡಿ ವಿಧಾನ ಸಭಾ ಶಾಸಕರಾದ ಹರೀಶ್ ಪೂಂಜಾರವರು ರಾತ್ರಿ 9 ಗಂಟೆಯಿಂದ 9:30 ಗಂಟೆಯ ಮಧ್ಯೆಯ ವೇಳೆಗೆ ತುಳು ಭಾಷೆಯಲ್ಲಿ ಮಾತನಾಡುತ್ತಾ ತೆಕ್ಕಾರಿನ ಕಂತ್ರಿ ಬ್ಯಾರಿಗಳು ಟ್ಯೂಬ್‌ಲೈಟ್ ಹೊಡೆದಿದ್ದಾರೆ. ಜನರೇಟರ್‌ನ ಡೀಸೆಲ್ ಕದ್ದಿದ್ದಾರೆ’ ಎಂಬ ಬಗ್ಗೆ ಸ್ಥಳೀಯರಿಂದ ನನಗೆ ಮಾಹಿತಿ ಬಂದಿದ್ದು ಈ ವೇಳೆ ನಾನು ಅವರಿಗೆ ಹೇಳಿದೆ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಮುಗಿಯುವ ಮೊದಲು ಯಾರೆಂದು ತಿಳಿದು ಬರುತ್ತದೆ. ನಮ್ಮಲ್ಲಿ ಸೌಹಾರ್ದತೆ ಬೇಕು ಎಂದು ಹೇಳುತ್ತಾರೆ. ನಾವು ಮಸೀದಿಗೆ ಹೋಗಿ ಇನ್ವಿಟೇಷನ್ ಪತ್ರ ಕೊಟ್ಟ ಕಾರಣ ಬ್ಯಾರಿಗಳು ಟ್ಯೂಬ್ ಹೊಡೆದಿದ್ದಾರೆ. ಅವರಿಗೆ ಇನ್ವಿಟೇಷನ್ ಕೊಡಬಾರದಿತ್ತು ಅವರನ್ನು ಕಾಯರ್ಯಕ್ರಮಕ್ಕೆ ಕರೆಯಬಾರದಿತ್ತು. ನಾವು ಹಿಂದುಗಳು ಹಿಂದೂಗಳೇ ಅವರನ್ನು ಸೇರಿಸಬಾರದು, ಎಂಬುದಾಗಿ ಉಲ್ಲೇಖಿಸಿ ಮಾತನಾಡುತ್ತಾ ಪ್ರಸ್ತುತ ತೆಕ್ಕಾರಿನಲ್ಲಿ 1200 ಮುಸ್ಲಿಂರು ಇದ್ದಾರೆ. ನಾವು 150 ಮನೆಯವರು ಇದ್ದೇವೆ. ಇನ್ನೂ ಕೆಲವು ವರ್ಷದಲ್ಲಿ ಮುಸ್ಲಿಂಮರು 600 ಜನ ಆಗುವುದಿಲ್ಲ ಇನ್ನು 10 ವರ್ಷ ಕಳೆದರೆ ಮುಸ್ಲಿಂಮರ ಸಂಖ್ಯೆ 5,000 ಜನ ಆಗುತ್ತಾರೆ. ಮುಸ್ಲಿಂಮರು 5000 ಜನ ಅಲ್ಲ 10,000 ಜನ ಆದರೂ ಅವರುಗಳನ್ನು ಎದುರಿಸಿ ನೀವು ಸನಾತನ ಹಿಂದೂ ಧರ್ಮವನ್ನು ಪಾಲನೆಮಾಡಿಕೊಂಡು ದೇವರ ಪೂಜೆಯನ್ನು ಮಾಡಿಕೊಂಡು ಬರಬೇಕು. ಎಂಬುದಾಗಿ ಪ್ರಚೋದನಾಕಾರಿಯಾಗಿ ಮಾತನಾಡುತ್ತಾ ಒಂದು ಧರ್ಮದವರನ್ನು ಇನ್ನೊಂದು ಧರ್ಮದವರ ವಿರುದ್ಧ ಎತ್ತಿ ಕಟ್ಟಿ ಕೋಮುಭಾವನೆಯನ್ನು ಉಂಟುಮಾಡಿ, ಧರ್ಮ ಧರ್ಮಗಳ ಮಧ್ಯೆ ದ್ವೇಷ ಉಂಟಾಗುವ ರೀತಿಯಲ್ಲಿ ಮಾತನಾಡಿದ್ದಾರೆ.ಇವರ ಭಾಷಣವನ್ನು ನಾನು ನೇರವಾಗಿ ನೋಡಿ ಆಲಿಸಿರುವುದಲ್ಲದೇ ಸೋಷಿಯಲ್ ಮೀಡಿಯಾದಲ್ಲಿಯೂ ನೋಡಿರುತ್ತೇನೆ. ಆ ರೀತಿಯಾಗಿ ಪ್ರಚೋದನಕಾರಿ ಭಾಷಣಮಾಡಿದ ಬೆಳ್ತಂಗಡಿ ವಿಧಾನ ಸಭಾ ಶಾಸಕರಾದ ಹರೀಶ್ ಪೂಂಜಾ ಎಂಬವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತೆಕ್ಕಾರು ನಿವಾಸಿ ಇಬ್ರಾಹಿಂ ಎಸ್.ಬಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮೇ.4 ರಂದು ದೂರು ನೀಡಿದ್ದಾರೆ. ಅದರಂತೆ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ BNS 196,353(A) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


