ಬೆಳ್ತಂಗಡಿ: ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿಗಳಿಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯ ವಿಳಾಸ ತಿಳಿಸದ ಕಾರಣ ಇಬ್ಬರಿಗೆ ಹಲ್ಲೆ ಮಾಡಿರುವ ಘಟನೆ ಆಗಸ್ಟ್ 2 ರಂದು ಸಂಜೆ ಉಜಿರೆ ಗ್ರಾಮದ ಪಾಣಿಯಾಲು ಎಂಬಲ್ಲಿ ನಡೆದಿದೆ. ಈ ಬಗ್ಗೆ ಆರೋಪಿ ಭಾಸ್ಕರ್ ನಾಯ್ಕ್ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪಾಣಿಯಾಲು ನಿವಾಸಿ ಉಷಾ ಎಂಬವರ ಬಳಿ ಕಾರಿನಲ್ಲಿ ಅಪರಿಚಿತ ವ್ಯಕ್ತಿಗಳು ಬಂದು ಮಹೇಶ್ ಶೆಟ್ಟಿ ತಿಮರೋಡಿಯ ವಿಳಾಸ ಕೇಳಿದ್ದು ಅದಕ್ಕೆ ಅವರು ವಿಳಾಸ ತಿಳಿಸದೆ ಇದ್ದು. ಬಳಿಕ ಸಂಜೆ 6:30 ಕ್ಕೆ ಬಿಳಿ ಕಾರಿನಲ್ಲಿ ಬಂದ ಭಾಸ್ಕರ ನಾಯ್ಕ್ ಯಾನೆ ಬೇಬಿ ಎಂಬಾತ ಸಿಟ್ಟಿನಿಂದ ಉಷಾ ಎಂಬರ ಬಲ ಭುಜ ತಲ್ಲಿದ ಪರಿಣಾಮವಾಗಿ ಉಷಾ ಎಂಬರು ನೆಲಕ್ಕೆ ಬಿದ್ದು ನೋವಾಗಿದ್ದು. ಈ ವೇಳೆ ಬೊಬ್ಬೆ ಹಾಕಿದಾಗ ಜನ ಸೇರುವುದನ್ನು ಗಮನಿಸಿ ಬಾಸ್ಕರ್ ನಾಯ್ಕ್ ಉಷಾ ಎಂಬವರ ಮನೆಯ ಮುಂದಿನ ಬಾಗಿಲ ಮೂಲಕ ಅಕ್ರಮವಾಗಿ ಪ್ರವೇಶ ಮಾಡಿ ಹಿಂಬಾಗಿಲಿನ ಮೂಲಕ ಓಡಿಹೋಗಿ ತೋಟದಲ್ಲಿದ್ದ ಆತನನ್ನು ಬೊಬ್ಬೆ ಕೇಳಿ ಬಂದ ಸತೀಶ್ ಮತ್ತು ಮತ್ತಿತರರು ಏನಾಯಿತು ಎಂದು ವಿಚಾರಿಸಿದಾಗ ಸತೀಶ್ ಎಂಬಾತನ ಬಲಕಾಲಿಗೆ ಕಾಲಿನಿಂದ ತುಳಿದು ಬಲಕೆನ್ನೆಗೆ ಕೈಯಿಂದ ಹೊಡೆದು ,ಅಂಗಿಯನ್ನು ಹಾರಿದು ಹಾಕಿದ ಭಾಸ್ಕರ್ ನಾಯ್ಕ್ ನನ್ನು ಹಿಡಿದು ಕುರಿಸಿ ಅಪರಿಚಿತ ವ್ಯಕ್ತಿಗಳನ್ನು ವಿಚಾರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಭಾಸ್ಕರ್ ನಾಯ್ಕ್ ಸಮಯ ಸಾಧಿಸಿ ತಪ್ಪಿಸಿಕೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಭಾಸ್ಕರ್ ನಾಯ್ಕ್ ದಾಖಲಾಗಿದ್ದು. ನಂತರ ಅದೇ ಆಸ್ಪತ್ರೆಗೆ ಸತೀಶನೂ ದಾಖಲಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲು: ಐಪಿಸಿ 1860(U/s 354,448,323 ಅಡಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾಸ್ಕರ್ ನಾಯ್ಕ್ @ ಬೇಬಿ ವಿರುದ್ಧ ಪ್ರಕರಣ ದಾಖಲಾಗಿದ್ದು. ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.