Wednesday, May 8, 2024
Homeತಾಜಾ ಸುದ್ದಿಆರ್ಕಿಡ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತಾ ಪಠ್ಯಕ್ರಮ

ಆರ್ಕಿಡ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತಾ ಪಠ್ಯಕ್ರಮ

spot_img
- Advertisement -
- Advertisement -

ಆರ್ಕಿಡ್ಸ್‌ ಅಂತಾರಾಷ್ಟ್ರೀಯ ಶಾಲೆಯು, ಭಾರತದ ಪ್ರಮುಖ ಸಿಬಿಎಸ್‌ಇ ಶಾಲೆಗಳ  ಸಮೂಹವಾಗಿದೆ. ಆರ್ಕಿಡ್ಸ್‌ ಶಾಲೆಯು  60ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಭಾರತದ ಪ್ರಮುಖ ನಗರಗಳಾದ ಮುಂಬೈ, ಬೆಂಗಳೂರು, ಪುಣೆ, ಇಂದೋರ್,‌ ಔರಂಗಾಬಾದ್‌, ಚೆನ್ನೈ, ಹೈದರಾಬಾದ್‌ ನಲ್ಲಿ ವ್ಯಾಪಕವಾಗಿ ಬೆಳೆದು ನಿಂತಿದೆ. ಆರ್ಕಿಡ್ಸ್‌ ತನ್ನ ಪಠ್ಯಕ್ರಮದಲ್ಲಿ ವಿನೂತನ ವಿಷಯಗಳನ್ನು ಪರಿಚಯಿಸಿದ್ದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮಹತ್ವ ನೀಡುತ್ತದೆ.

ಆರ್ಕಿಡ್ಸ್‌ ತಮ್ಮ ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತಾ ಪಠ್ಯಕ್ರಮವನ್ನು ಪರಿಚಯಿಸಿದೆ. ವಿದ್ಯಾರ್ಥಿಗಳಿಗೆ  ಹಣಕಾಸಿನ ಪ್ರಪಂಚ ಮತ್ತು ಅದರ ಸೂಕ್ಷ್ಮ ವ್ಯತ್ಯಾಸಗಳನ್ನು  ಪರಿಚಯಿಸಲು, ವೃತ್ತಿಪರ ತಜ್ಞರು ವಿನ್ಯಾಸಗೊಳಿಸಿದ  ‘ಆರ್ಥಿಕ ಸಾಕ್ಷರತಾ” ಕಾರ್ಯಕ್ರಮ”ವನ್ನು ಪ್ರಾರಂಭಿಸಲಾಗಿದೆ. 

ಸದರಿ ಪಠ್ಯಕ್ರಮವನ್ನು ಭಾರತಾದ್ಯಂತ ಇರುವ ಆರ್ಕಿಡ್ಸ್‌ ನ 60ಕ್ಕೂ ಹೆಚ್ಚು ಶಾಖೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಕಲಿಸಲಾಗುತ್ತದೆ. ಈ ವಿನೂತನ ಯೋಜನೆಯ ಬಗ್ಗೆ ಆರ್ಕಿಡ್ಸ್‌ನ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ  ಶೈಕ್ಷಣಿಕ ಮುಖ್ಯಸ್ಥರಾದ  ಶುಭಂ ಚೌಹಾಣ್ ಮಾತನಾಡಿ , “ಇಂದು, ಆರ್ಥಿಕ ಸಾಕ್ಷರತೆಯು ಪ್ರಮುಖವಾದ ಜೀವನ ಕೌಶಲ್ಯವಾಗಿದೆ. ವಿದ್ಯಾರ್ಥಿಗಳಿಗೆ ಶಾಲಾ ಜೀವನದಲ್ಲೇ ಆರ್ಥಿಕ ನಿರ್ವಹಣೆಯ ವಿವಿಧ ಅಗತ್ಯ ಅಂಶಗಳನ್ನು ಪರಿಚಯಿಸಬೇಕು. ಇದರಿಂದ ಅವರು  ಆರ್ಥಿಕವಾಗಿ ಸಾಕ್ಷರತೆಯನ್ನು ಹೊಂದಿರುವ ಜವಾಬ್ದಾರಿಯುತ ನಾಗರಿಕರಾಗಬಹುದು. ಆರ್ಥಿಕ ಜಗತ್ತಿನಲ್ಲಿ ಬದಲಾವಣೆಯಾಗುತ್ತಿರುವ ವಿದ್ಯಾಮಾನಗಳನ್ನು ನಮ್ಮ ಭವಿಷ್ಯದ ಪೀಳಿಗೆಯು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಆರ್ಥಿಕ ಸಾಕ್ಷರತಾ ಪಠ್ಯಕ್ರಮದಿಂದಾಗಿ  ಲಭ್ಯವಿರುವ ವಿವಿಧ ಹಣಕಾಸು ಉತ್ಪನ್ನಗಳ ಬಗ್ಗೆ ವಿದ್ಯಾರ್ಥಿಗಳ ತಿಳುವಳಿಕೆ ಹೆಚ್ಚಾಗುತ್ತದೆ ಎಂಬುದು ನಮ್ಮ ಅಚಲ ನಂಬಿಕೆ” ಎಂದರು.

 ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ವಾರಕ್ಕೆ ಒಂದು ತರಗತಿಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳು ತರಗತಿಗಳಲ್ಲಿ   ವೈಯಕ್ತಿಕ ಹಣಕಾಸು, ಬ್ಯಾಂಕಿಂಗ್‌ನ ಮೂಲ ಪ್ರಕ್ರಿಯೆಗಳು ಮತ್ತು ವಿವಿಧ ರೀತಿಯ ಉಳಿತಾಯ ಆಯ್ಕೆಗಳು, ಮುಂತಾದ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಶಾಲಾ ದಿನಗಳಲ್ಲಿಯೇ ಹಣಕಾಸಿನ ವಿಚಾರಗಳನ್ನು ಪರಿಚಯಿಸುವುದರಿಂದ,  ಮುಂದೆ ಜೀವನದಲ್ಲಿ ಆರ್ಥಿಕ ವಿಚಾರಗಳಲ್ಲಿ ಸಂಕಷ್ಟ ಎದುರಾದಾಗ, ಅದನ್ನು  ನಿಭಾಯಿಸುವ ಕಲೆಯನ್ನು ವಿದ್ಯಾರ್ಥಿಗಳು ಅರಿತಿರುತ್ತಾರೆ.

ಪ್ರಾಯೋಗಿಕ ತರಗತಿಗಳು

1. ಪಾಠಗಳ ಜೊತೆಗೆ ಪ್ರಾಯೋಗಿಕ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡುವುದು ಶಾಲೆಯ ಉದ್ದೇಶವಾಗಿದೆ.

2. ವಿದ್ಯಾರ್ಥಿಗಳನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ, ಅಲ್ಲಿನ ಸೇವೆಗಳ ಬಗ್ಗೆ ವಿವರಿಸಲಾಗುತ್ತದೆ.

3. ವಿದ್ಯಾರ್ಥಿಗಳಿಗೆ ಬ್ಯಾಂಕಿನ ಮೂಲಭೂತ ಸೇವೆಗಳ ಬಗ್ಗೆ ಅರಿವಿರಬೇಕು.

4. ಬ್ಯಾಂಕು ಖಾತೆ ಸಂಬಂಧಿಸಿದಂತೆ, ಇತರ ವಾಣಿಜ್ಯ ವ್ಯವಹಾರಗಳನ್ನು ಸುಲಭವಾಗಿ  ಮಾಡಲು ಸಾಧ್ಯವಾಗಬೇಕು.

ವಿದ್ಯಾರ್ಥಿಗಳು ಅವರ ಪೋಷಕರಿಗೆ ಆರ್ಥಿಕ ವಿವರಗಳ ಬಗ್ಗೆ ತಿಳಿಸುವಂತಾಗಬೇಕು. ಹಣಕಾಸಿನ ವಿಚಾರಗಳನ್ನು ಲೀಲಾಜಾಲವಾಗಿ ನಿರ್ವಹಿಸುವಂತೆ ಆಗಬೇಕು ಎಂಬುದು ಆರ್ಕಿಡ್ಸ್‌ ಸಂಸ್ಥೆಯ ಉದ್ದೇಶ.

- Advertisement -
spot_img

Latest News

error: Content is protected !!